ಕುರ್ಕಾಲು: ಇಸ್ಪೀಟು ಜುಗಾರಿಯಲ್ಲಿ ತೊಡಗಿದ್ದ 9 ಮಂದಿಯ ಬಂಧನ
ಶಿರ್ವಾ: ಕುರ್ಕಾಲು ಗ್ರಾಮದ ಗಿರಿನಗರ ಎಂಬಲ್ಲಿರುವ ಸ್ವಂದನ ಬಿಲ್ಡಿಂಗ್ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಟದಲ್ಲಿ ತೊಡಗಿದ್ದ 9 ಮಂದಿಯನ್ನು ಶಿರ್ವಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹7250 ನಗದು ವಶಪಡಿಸಿಕೊಂಡಿದ್ದಾರೆ. ಬೆಳ್ಳೆ ಗ್ರಾಮದ ಮುಖೇಶ (33), ಕುರ್ಕಾಲು ತೋಟದ ಮನೆಯ ವಿತೇಶ್(33), ಮೂಡುಬೆಟ್ಟು ಗ್ರಾಮದ ಕಿಶೋರ್(28), ಕುರ್ಕಾಲು ಗ್ರಾಮದ ಪವನ್ (28), ಪ್ರದೀಪ (22), ವಿಶಾಲ್(30), ಮ್ಯಾಕ್ಸನ್ (27), ಎಲ್ಲೂರು ಗ್ರಾಮದ ರೋಶನ್(29), ಕುರ್ಕುಲು ಗ್ರಾಮದ ಪ್ರಶಾಂತ್(35) ಬಂಧಿತ ಆರೋಪಿಗಳು. ಈ ಬಗ್ಗೆ […]