ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ಮಣ್ಣು ಉಳಿಸಿ ಅಭಿಯಾನ ಕಾರ್ಯಕ್ರಮ

ಕುಂದಾಪುರ: ಮಣ್ಣಿನ ನೈಸರ್ಗಿಕ ಗುಣಲಕ್ಷಣಗಳು ಹಾಗೂ ಸ್ವರೂಪಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಕೃತಕ ರಾಸಾಯನಿಕ ಗೊಬ್ಬರಗಳ ಬಳಕೆ ಹಾಗೂ ವಿಷಪೂರಿತ ತ್ಯಾಜ್ಯದಿಂದಾಗಿ ಮಣ್ಣಿನ ಮಾಲಿನ್ಯ ಹೆಚ್ಚುತ್ತಿರುವುದು ಆತಂಕಕಾರಿಯಾದ ವಿಷಯ ಎಂದು ಇಶಾ ಫೌಂಡೇಶನ್ ಕೊಯಮುತ್ತೂರು ಇದರ ಸ್ವಯಂ ಸೇವಕರಾದ ಶ್ರೀ ಬಿ.ಎನ್. ವೆಂಕಟೇಶ್‌ ಹೇಳಿದರು. ಅವರು ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ಎನ್.ಎಸ್.ಎಸ್ ಘಟಕ ಹಾಗೂ ಇಶಾ ಫೌಂಡೇಶನ್ ಆಯೋಜಿಸಿದ ಮಣ್ಣು ಉಳಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ತನ್ನ ಮೂಲ ಸತ್ವವನ್ನು ಕಳೆದುಕೊಳ್ಳುತ್ತಿರುವ ಮಣ್ಣನ್ನು […]

ಕುಂದಾಪುರ ವೆಂಕಟರಮಣ ಪದವಿ  ಪೂರ್ವ ಕಾಲೇಜಿನಲ್ಲಿ  ಪ್ರೇರಣಾ ಶಿಬಿರ

ಕುಂದಾಪುರ: ವೆಂಕಟರಮಣ ಪದವಿ  ಪೂರ್ವ ಕಾಲೇಜಿನಲ್ಲಿ ಮೇ 13 ಶುಕ್ರವಾರದಂದು  ದ್ವಿತೀಯ ಪಿಯುಸಿ  ವಿಜ್ಞಾನ ವಿಭಾಗದ  ವಿದ್ಯಾರ್ಥಿಗಳಿಗೆ  ಆಯೋಜಿಸಲಾಗಿದ್ದ ಪ್ರೇರಣಾ ಶಿಬಿರದಲ್ಲಿ ಕುಂದಾಪುರ ಗ್ರಾಮೀಣ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ಕೋಟೇಶ್ವರ ಇಲ್ಲಿನ ವೈದ್ಯರುಗಳಾದ ಡಾ. ಅಕ್ಷತಾ  ಹಾಗೂ  ಡಾ. ವಾಣಿಶ್ರೀ ಐತಾಳ  ಮುಖ್ಯ ಅತಿಥಿಗಳಾಗಿ  ಆಗಮಿಸಿ, ವಿದ್ಯಾರ್ಥಿಗಳು ಕಲಿಕೆಯಲ್ಲಿ ಏಕಾಗ್ರತೆಯನ್ನು ಸಾಧಿಸುವ  ಮಾರ್ಗಗಳು ಹಾಗೂ ಇಂದಿನ ವೈಜ್ಞಾನಿಕ ಕಂಪ್ಯೂಟರ್ ಯುಗದ  ಧಾವಂತದ  ಬದುಕಿನಲ್ಲಿ ವಿದ್ಯಾರ್ಥಿಗಳು ಮೊಬೈಲ್, ಇಂಟರ್ ನೆಟ್ ನ ಅತಿಯಾದ ಬಳಕೆಯಿಂದ  ದೂರ ಇರುವುದರ  ಮೂಲಕ  ಭವ್ಯ  ಭವಿಷ್ಯ  ರೂಪಿಸಿಕೊಳ್ಳುವುದು ಹೇಗೆ ಎನ್ನುವುದರ  ಕುರಿತು ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ರಾಗಿಣಿ ಉಪಸ್ಥಿತರಿದ್ದರು. ಆಂಗ್ಲ ಭಾಷಾ   ಉಪನ್ಯಾಸಕ  ಶ್ರೀ ಅಶೋಕ್  ಕಾರ್ಯಕ್ರಮ ನಿರೂಪಿಸಿದರು.

ಇಮ್ಮಡಿ ದೇವರಾಯನ ಕಾಲದ ಶಿಲಾ ಶಾಸನ ಪತ್ತೆ

ಕುಂದಾಪುರ: ಕಲ್ಯಾಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುತೋನ್ಸೆ ಗ್ರಾಮದ ಕೆಮ್ಮಣ್ಣು ಮತ್ತು ನಡಂಬಳ್ಳಿ ನಡುವಿನ ಮೂಡಲಕಟ್ಟೆಯಲ್ಲಿ ವಿಜಯನಗರ ಸಾಮ್ರಾಜ್ಯದ ರಾಜ ಇಮ್ಮಡಿ ದೇವರಾಯನ ಕಾಲದ ಶಿಲಾ ಶಾಸನ ಪತ್ತೆಯಾಗಿದೆ. ಮೂರು ಅಡಿ ಎತ್ತರ ಮತ್ತು ಎರಡು ಅಡಿ ಅಗಲವಿರುವ, ಸಂಪೂರ್ಣವಾಗಿ ಸವೆದು ಹೋಗಿರುವ ಸ್ಥಿತಿಯಲ್ಲಿರುವ ಗ್ರಾನೈಟ್ ಕಲ್ಲಿನಿಂದ ಮಾಡಲ್ಪಟ್ಟಿರುವ ಈ ಶಾಸನವನ್ನು ಕನ್ನಡ ಭಾಷೆಯಲ್ಲಿ ಬರೆಯಲಾಗಿದೆ. ಒಟ್ಟು 24 ಸಾಲುಗಳಿವೆ. ಶಾಸನವು ‘ಶ್ರೀ ಗಣಾಧಿಪತಯೇ ನಮಃ’ ಶ್ಲೋಕದಿಂದ ಪ್ರಾರಂಭವಾಗುತ್ತದೆ ಮತ್ತಿದು ಕ್ರಿ.ಶ 1353 ಅಥವಾ 1431 ವರ್ಷಗಳ […]

ಹೋಟೇಲ್ ಪಾಕಶಾಲ: ನೂತನ ಶಾಖೆ ಉದ್ಘಾಟನೆ

ಕುಂದಾಪುರ: ಕೆ. ಎನ್. ವಾಸುದೇವ ಅಡಿಗರವರ ನೂತನ ಶಾಖೆ ಕುಂಭಾಶಿ, ಕುಂದಾಪುರ “ಪಾಕಶಾಲ” ಹೋಟೆಲ್ ಮತ್ತು ಉಪಹಾರ ಗೃಹದ ಅದ್ದೂರಿ ಉದ್ಘಾಟನ ಸಮಾರಂಭಕ್ಕೆ ಹೃದಯಪೂರ್ವಕ ಆಮಂತ್ರಣ ದಿನಾಂಕ ಮೇ 1, 2022 ಸಂಜೆ 5.00 ಕ್ಕೆ ಮುಖ್ಯ ಅತಿಥಿ: ಶ್ರೀ ಕೋಟ ಶ್ರೀನಿವಾಸ ಪೂಜಾರಿ ಮಾನ್ಯ ಸಚಿವರು, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ಅತಿಥಿ: ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ ಶಾಸಕರು ಕುಂದಾಪುರ, ಶ್ರೀ ವಿಶ್ವಾಂಭರ ಉಪಾಧ್ಯ ಆನೆಗುಡ್ಡ ದೇವಸ್ಥಾನ ಟ್ರಸ್ಟಿ, ಶ್ರೀ ಆನಂದ್ ಸಿ ಕುಂದರ್ ಜನತಾ […]

ಡೆಂಗ್ಯೂ ನಿಯಂತ್ರಣಕ್ಕೆ ವಿಶೇಷ ಅಭಿಯಾನ ನಡೆಸಿ: ಕೂರ್ಮಾರಾವ್

ಉಡುಪಿ: ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮುದೂರು ಮತ್ತು ಜಡ್ಕಲ್ ಗ್ರಾಮಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ, ಸ್ಥಳೀಯ ಸಂಸ್ಥೆ ಸೇರಿದಂತೆ ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಮೂರು ದಿನಗಳ ವಿಶೇಷ ಡೆಂಗ್ಯೂ ನಿಯಂತ್ರಣ ಅಭಿಯಾನ ನಡೆಸಿ, ಡೆಂಗ್ಯೂ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಂಗಳವಾರ ಕೊಲ್ಲೂರು ವ್ಯಾಪ್ತಿಯ ಮುದೂರು ಮತ್ತು ಜಡ್ಕಲ್ ಗ್ರಾಮಗಳ ಡೆಂಗ್ಯೂ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ನಿಯಂತ್ರಣಾ ಕ್ರಮಗಳ […]