ಕಟ್‌ಬೇಲ್ತೂರು ಭದ್ರಮಹಾಕಾಳಿ ದೈವಸ್ಥಾನಕ್ಕೆ ನುಗ್ಗಿದ ಕಳ್ಳರು, ನಗದು ಹೊತ್ತೊಯ್ದರು

ಕುಂದಾಪುರ: ತಾಲೂಕಿನ ಕಟ್‌ಬೇಲ್ತೂರು ಭದ್ರಮಹಾಕಾಳಿ ದೈವಸ್ಥಾನಕ್ಕೆ ಸೋಮವಾರ ತಡರಾತ್ರಿ ನುಗ್ಗಿದ ಕಳ್ಳನೋರ್ವ ನಗದು ದೋಚಿ ಪರಾರಿಯಾಗಿದ್ದು, ಘಟನೆ ಮಂಗಳವಾರ ಬೆಳಿಗ್ಗೆ ಕಳ್ಳತನ ಬೆಳಕಿಗೆ ಬಂದಿದೆ. ನಸುಕಿನ ಜಾವ ಮೂರು ಹದಿನೈದರ ಸುಮಾರಿಗೆ ಕೊಡೆ ಮತ್ತು ಚೀಲವೊಂದನ್ನು ಹಿಡಿದು ಬೀಗ ಒಡೆದು ದೈವಸ್ಥಾನದ ಒಳಪ್ರವೇಶಿಸಿದ ಕಳ್ಳ ಕಾಣಿಗೆ ಡಬ್ಬಿ ಒಡೆದು ನಗದು ದೋಚಿ, ಅಲ್ಲೇ ಸಮೀಪದಲ್ಲಿರುವ ಇನ್ನೊಂದು ಡಬ್ಬಿಯನ್ನು ಕೊಂಡೊಯ್ದಿದ್ದಾನೆ. ಕಳ್ಳ ದೈವಸ್ಥಾನದ ಅನತಿ ದೂರದಲ್ಲಿರುವ ರೈಲ್ವೆ ರಸ್ತೆಯ ಸಮೀಪದಲ್ಲಿ ಕಾಣಿಕೆ ಡಬ್ಬಿ, ಚಿಲ್ಲರೆ ಹಣ ಹಾಗೂ ಕೃತ್ಯಕ್ಕೆ […]