ಕುಂದಾಪುರ: ಸಹನಾ ಸಮೂಹ ಸಂಸ್ಥೆಗಳ ಮಾಲೀಕ ಸುರೇಂದ್ರ ಶೆಟ್ಟಿ ಕೊಲೆಗೆ ಯತ್ನ: ಓರ್ವ ಆರೋಪಿಯ ಬಂಧನ.
ಉಡುಪಿ: ಸಹನಾ ಸಮೂಹ ಸಂಸ್ಥೆಗಳ ಮಾಲೀಕ ಸುರೇಂದ್ರ ಶೆಟ್ಟಿ ಅವರ ಕೊಲೆ ಮಾಡಲು ಇಬ್ಬರು ದುಷ್ಕರ್ಮಿಗಳು ವಿಫಲಯತ್ನ ನಡೆಸಿದ ಘಟನೆ ಜು.7 ರಂದು ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ. ಎಸ್ಎಸ್ಎಸ್ ಟ್ರಾವೆಲ್ಸ್ ಎಂಬ ಸಂಸ್ಥೆಯ ಮಾಲೀಕ ಸತೀಶ್ ಶೆಟ್ಟಿ (53) ಬಂಧಿತ ಆರೋಪಿಯಾಗಿದ್ದು, ಪುತ್ರ ಸನ್ನಿಧಿ ಶೆಟ್ಟಿ ತಲೆಮರೆಸಿಕೊಂಡಿದ್ದಾನೆ. ಸಹನಾ ಸುರೇಂದ್ರ ಶೆಟ್ಟಿ ಅವರ ಪತ್ನಿ ಕುಂದಾಪುರ ನಗರದ ಎ.ಎಸ್ ಟ್ರೇಡರ್ ಎಂಬ ಪ್ಲ್ಯಾಟ್ ನಲ್ಲಿ ಮಳೆ ನೀರಿಗೆ ಸಂಬಂಧಿಸಿದ […]