ಕುಂದಾಪುರ: ಕೆರೆಗಳ ಮೀನು ಪಾಶುವಾರು ಹಕ್ಕು ನೇರ ಗುತ್ತಿಗೆ- ಅರ್ಜಿ ಆಹ್ವಾನ

ಉಡುಪಿ :  ಕುಂದಾಪುರ ತಾಲೂಕಿನ ಕೋಡಿಕೆರೆ ಮತ್ತು ಕೋಟೆಕೆರೆಗಳ ಮೀನು ಪಾಶುವಾರು ಹಕ್ಕನ್ನು 2019-20 ನೇ ಮೀನುಗಾರಿಕೆ ಫಸಲಿವರ್ಷದಿಂದ 2023-24 ನೇ ಮೀನುಗಾರಿಕೆ ಫಸಲಿ ವರ್ಷದವರೆಗೆ ಗರಿಷ್ಟ 5 ವರ್ಷಗಳಿಗೆ ಸರ್ಕಾರದ ನಿಯಮ, ಷರತ್ತು ಮತ್ತು ನಿಬಂಧನೆಗೊಳಪಟ್ಟಂತೆ ಅರ್ಹ ಮೀನುಗಾರಿಕೆ ಸಹಕಾರಿ ಸಂಘಕ್ಕೆ ಗುತ್ತಿಗೆ ನೀಡಲಾಗುವುದು.      ಗುತ್ತಿಗೆ ಪಡೆಯಲಿಚ್ಛಿಸುವ ಅರ್ಹ ಮೀನುಗಾರರ ಸಹಕಾರ ಸಂಘದವರು ಮಾತ್ರ ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಮೇ 23 ರ ಒಳಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಶ್ರೇಣಿ-2, ಕುಂದಾಪುರ, ಕಚೇರಿಗೆ ಕಚೇರಿ […]

ಕುಂದಾಪುರ:ವಿಶ್ವ ರಂಗಭೂಮಿ ದಿನಾಚರಣೆ

ಕುಂದಾಪುರ: ಮೃಗವಾಗಿದ್ದ ನಮ್ಮ ಪೂರ್ವಜರು ಮಾನವರಾದದ್ದು ಕೇವಲ ಜೈವಿಕ ವಿಕಾಸದಿಂದಷ್ಟೇ ಅಲ್ಲ, ನಾವು ಮನುಷ್ಯ ಎಂದು ಕರೆಯಿಸಿಕೊಳ್ಳಲು ಸಾಧ್ಯವಾದದ್ದೇ ಸಾಂಸ್ಕ್ರತಿಕ ವಿಕಾಸದಿಂದ. ಪ್ರಶ್ನೆಯೇ ನಮ್ಮಲ್ಲಿ ಪ್ರಜ್ಞೆಯನ್ನು ಹುಟ್ಟಿಸಿತು. ಆ ಪ್ರಶ್ನೆಯನ್ನು ಇನ್ನೊಬ್ಬರಿಗೆ ಕೇಳುವಾಗಲೇ ರಂಗಭೂಮಿ ಹುಟ್ಟಿತು ಎಂದು ಸಮುದಾಯ ಸಂಘಟನೆಯ ಅಧ್ಯಕ್ಷ ಉದಯ ಗಾಂವ್ಕರ್ ಹೇಳಿದರು. ಅವರು ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ಬುಧವಾರ ಸಮುದಾಯ ಸಾಂಸ್ಕ್ರತಿಕ ಸಂಘಟನೆ, ಜೇಸಿಐ ಕುಂದಾಪುರ ಸಂಸ್ಥೆಯ ಸಹಯೋಗದಲ್ಲಿ ಇಲ್ಲಿನ ಜೆಸಿಐ ಭವನದಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ […]