ಕುಂದಾಪುರ:ವಿದ್ಯಾರ್ಥಿನಿಯರನ್ನು ತಡೆದ ಪ್ರಾಂಶುಪಾಲರ ನಡೆ ಖಂಡನಾರ್ಹ:ಎಸ್ ಐ ಓ

ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 3/02/2022 ರ ಗುರುವಾರದಂದು ಎಂದಿನಂತೆ ಶಿರವಸ್ತ್ರ ಧರಿಸಿ ಬಂದ ವಿದ್ಯಾರ್ಥಿನೀಯರನ್ನು ಕಾಲೇಜಿನ ಕ್ಯಾಂಪಸಿನ ಗೇಟಿನ ಬಳಿಯೇ ತಡೆದು ಅಮಾನವೀಯವಾಗಿ ವರ್ತಿಸಿದ ಪ್ರಾಂಶುಪಾಲರ ವರ್ತನೆ ನಿಜಕ್ಕೂ ಖೇದಕರ. ಈ ಘಟನೆ ಖಂಡನಾರ್ಹ  ಎಂದು ಎಸ್.ಐ.ಓ ಪ್ರಕಟನೆಯಲ್ಲಿ ತಿಳಿಸಿದೆ ಬಹಳಷ್ಟು ವರ್ಷದಿಂದ ವಿದ್ಯಾರ್ಥಿನೀಯರು ಶಿರವಸ್ತ್ರದೊಂದಿಗೆ ಸರ್ಕಾರಿ ಪದವಿಪೂರ್ವ ಕಾಲೇಜು ಕುಂದಾಪುರದಲ್ಲಿ ವಿದ್ಯಾಭ್ಯಾಸ ಮಾಡುತ್ತ ಬಂದಿದ್ದಾರೆ. ಈ ಮುಂಚೆ ಕೂಡ ವಿದ್ಯಾರ್ಥಿನೀಯರು ಸದ್ರಿ ಕಾಲೇಜಿನಲ್ಲಿ ಶಿರವಸ್ತ್ರದೊಂದಿಗೆ ಶಿಕ್ಷಣ ಪಡೆದು ಹೋಗಿದ್ದಾರೆ. […]

ಮಾರಣಕಟ್ಟೆ ದೇವಳ ಪ್ರಾಂಗಣ ಸ್ವಚ್ಛತಾ ಕಾರ್ಯ

ಕುಂದಾಪುರ: ರಿಕ್ಷಾ ಚಾಲಕ ಮಾಲಕರ ಸಂಘ ಮಾರಣಕಟ್ಟೆ, ಅಯ್ಯಪ್ಪ ಸ್ವಾಮಿ ಭಕ್ತವೃಂದ, ಶ್ರೀ ಕ್ಷೇತ್ರ ಮಾರಣಕಟ್ಟೆಯ ಹಣ್ಣುಕಾಯಿ ಅಂಗಡಿಯವರು, ದೇವಸ್ಥಾನದ ನೌಕರ ವೃಂದದವರು ಸ್ವಯಂಪ್ರೇರಿತವಾಗಿ ಶನಿವಾರ ಮಾರಣಕಟ್ಟೆ ದೇವಸ್ಥಾನದ ಎದುರು ಪ್ರಾಂಗಣವನ್ನು ಸಂಪೂರ್ಣ ಸ್ವಚ್ಛ ಮಾಡಿದರು. ಮಾರಣಕಟ್ಟೆ ಬಸ್ ನಿಲ್ದಾಣದಿಂದ ದೇವಸ್ಥಾನದ ತನಕ ಇಡೀ ಪ್ರಾಂಗಣದ ಕಸವನ್ನೆಲ್ಲಾ ತಗೆದು, ಸೋಪ್ ಆಯಿಲ್, ಫಿನೈಲ್ ಬಳಸಿ ನೀರಿನಿಂದ ಪ್ರಾಂಗಣವನ್ನು ತೊಳೆಯಲಾಯಿತು. ಕೊರೋನಾದಿಂದ ದೇವಸ್ಥಾನಕ್ಕೆ ಭಕ್ತರಿಗೆ ನಿರ್ಬಂಧ ಹಾಕಿರುವುದರಿಂದ ಸ್ವಚ್ಛತಾ ಕಾರ್ಯ ನಡೆಯಿತು. ಸ್ವಯಂ ಪ್ರೇರಿತವಾಗಿ ೪೦ಕ್ಕೂ ಹೆಚ್ಚು ಜನ […]

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ: ಧರಣಿ ಸತ್ಯಾಗ್ರಹದ ಪೂರ್ವಭಾವಿ ಸಭೆ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ, ಶಾಸ್ತ್ರಿ ಸರ್ಕಲ್ ಮೇಲ್ಸೇತುವೆÀ ನಿರ್ಮಾಣ ವಿಳಂಬ, ಫಾಸ್ಟ್‍ಟ್ಯಾಗ್ ಕಡ್ಡಾಯಗೊಳಿಸುವುದು ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತು ಡಿಸೆಂಬರ್ ನಲ್ಲಿ ನಡೆಸಲುದ್ದೇಶಿಸಿರುವ ಧರಣಿ ಸತ್ಯಾಗ್ರಹದ ಪೂರ್ವಭಾವಿ ಸಭೆ ಕರೆಯಲಾಗಿದೆ  ನವೆಂಬರ್ 29ರ ಶುಕ್ರವಾರ ಸಂಜೆ 5 ಗಂಟೆಗೆ ಕುಂದಾಪುರದ ಬೋರ್ಡ್‍ಹೈಸ್ಕೂಲಿನ ಕಲಾಮಂದಿರದಲ್ಲಿ ಕುಂದಾಪುರ ಮತ್ತು ಆಸುಪಾಸಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು. ಸಭೆಯಲ್ಲಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಜೆ.ಸಿ, ಯುವಕ, ಯುವತಿ ಮಂಡಲಗಳು, ರಿಕ್ಷಾ ಚಾಲಕ- ಮಾಲಕÀರು, ಟ್ಯಾಕ್ಸಿ […]

ಕುಂದಾಪುರ:ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬೆಳ್ಳಿಹಬ್ಬ

ಕುಂದಾಪುರ: ಛಾಯಾಗ್ರಾಹಕರು ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಇತರರ ಬಾಳಿಗೆ ಬೆಳಕಾಗುವ ಕೆಲಸಕ್ಕೆ ಮುಂದಾಗಿರುವುದು ಶ್ಲಾಘನೀಯ ಕಾರ್ಯ. ತಮ್ಮ ಮನಸ್ಸು, ಕನಸುಗಳನ್ನು ಜನರಿಗೆ ಅರ್ಪಿಸಿ ಪ್ರಾಮಾಣಿಕ ಸೇವೆ ನೀಡುವ ಛಾಯಗ್ರಾಹಕರಿಗೆ ದೇವರು ಎಂದಿಗೂ ಒಳ್ಳೇದನ್ನೇ ಕರುಣಿಸುತ್ತಾನೆ ಎಂದು ಉದ್ಯಮಿ ಸುರೇಶ್ ಡಿ ಪಡುಕೋಣೆ ಹೇಳಿದರು. ಅವರು ಸೋಮವಾರ ಸಂಜೆ ಇಲ್ಲಿನ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್(ರಿ) ಕುಂದಾಪುರ ವಲಯದ ಬೆಳ್ಳಿ ಹಬ್ಬದ ಸವಿ ನೆನೆಪು ಹಾಗೂ 26ನೇ ಪದಗ್ರಹಣ ಸಮಾರಂಭವನ್ನು […]

ಕುಂದಾಪುರ ಕಾಂಗ್ರೆಸ್: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜನ್ಮ ದಿನಾಚರಣೆ

ಕುಂದಾಪುರ: ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಇಂದು ಗಾಂಧಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಮಾಜಿ ಅದ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕೆಎಫ್‌ಡಿಸಿ ಮಾಜಿ ಅಧ್ಯಕ್ಷ ಬಿ.ಹಿರಿಯಣ್ಣ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಚಿಂತನೆಗಳ ಮಹತ್ವದ ಕುರಿತು ಸಭೆಗೆ ವಿವರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿ ಪ್ರಸಾದ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂಧರ್ಭದಲ್ಲಿ ಕಾಂಗ್ರೆಸ್ ಐ.ಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೇರೆಗಾರ, ಪುರಸಭಾ ಸದಸ್ಯರಾದ ಪ್ರಭಾವತಿ […]