ಕುಂದಾಪುರ: ದಾರಿ ತಪ್ಪಿಸ್ತಿದೆ ದಾರಿಫಲಕ ! ಕೊಲ್ಲೂರು ಯಾತ್ರಾರ್ಥಿಗಳಿಗೆ ಗೊಂದಲ
ಕುಂದಾಪುರ: ಕುಂದಾಪುರದಿಂದ ಕಾರವಾರದ ತನಕ ಚತುಷ್ಪತ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಐಆರ್‌ಬಿ ಕಂಪೆನಿ ತಲ್ಲೂರಿನಲ್ಲಿ ಅಳವಡಿಸಿರುವ ನಾಮಫಲಕ ಇದೀಗ ಕೊಲ್ಲೂರು ಯಾತ್ರಾರ್ಥಿಗಳನ್ನು ಗೊಂದಲಕ್ಕೀಡುಮಾಡಿದೆ. ಕಳೆದ ಒಂದು ತಿಂಗಳ ಹಿಂದೆ ಹೆದ್ದಾರಿ ಗುತ್ತಿಗೆ ವಹಿಸಿಕೊಂಡಿರುವ ಐಆರ್‌ಬಿ ಕಂಪೆನಿ ಹೆಮ್ಮಾಡಿಗಿಂತ ಮೂರು ಕಿ.ಮೀ ಹಿಂದಿರುವ ತಲ್ಲೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನೇರಳಕಟ್ಟೆ-ನೆಂಪು ಮಾರ್ಗವಾಗಿ ಕೊಲ್ಲೂರಿಗೆ ಸಂಕರ್ಪ ಕಲ್ಪಿಸುವ ರಸ್ತೆಯತ್ತ ನಾಮಫಲಕ ಅಳವಡಿಸಿದ್ದರಿಂದ ಇದೀಗ ಸಮಸ್ಯೆ ಎದುರಾಗಿದೆ. ಇದರಿಂದಾಗಿ ಕೇರಳ, ತಮಿಳುನಾಡು, ಬೆಂಗಳೂರಿನಿಂದ ಕೊಲ್ಲೂರಿಗೆ ತೆರಳುವ ಯಾತ್ರಾರ್ಥಿಗಳು ತಲ್ಲೂರಿನಲ್ಲಿ ಟರ್ನ್ ಪಡೆದುಕೊಂಡು […]