ಕುಂದಾಪುರ:ದಲಿತ ಮುಖಂಡನ ನಿಂದನೆ ಖಂಡಿಸಿ ದ.ಸಂ.ಸ ವತಿಯಿಂದ ಪ್ರತಿಭಟನೆ

ಕುಂದಾಪುರ: ಮೂಲ ನಿವಾಸಿಗಳ ಹೆಸರಲ್ಲಿ ಪತ್ರಿಕಾ ಪ್ರಚಾರ ಪಡೆದು ಬಿಳಿ ಅಂಗಿ ಧರಿಸಿ ಶೋಕಿ ಮಾಡುತ್ತಾರೆ ಎಂದು ದಲಿತ ಮುಖಂಡ ವಾಸುದೇವ ಮುದೂರು ಅವರನ್ನು ಜಡ್ಕಲ್ ಗ್ರಾಪಂ ಅಧ್ಯಕ್ಷರು ನಿಂದಿಸಿದ್ದಾರೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಜಡ್ಕಲ್ ಗ್ರಾಮಪಂಚಾಯತಿ ಎದುರು ಸೋಮವಾರ ಬೆಳಿಗ್ಗೆ ಜಮಾಯಿಸಿ ಆಕ್ರೋಷ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರತಿಭಟನೆ ನಡೆಸಲು ಮುಂದಾದ ದಲಿತ ನಾಯಕರನ್ನು ಮನವೊಲಿಸಿಸಲು ಖುದ್ದು ಕುಂದಾಪುರ ಡಿವೈಎಸ್ಪಿ ಬಿ.ಪಿ, ದಿನೇಶ್ ಕುಮಾರ್ ಗ್ರಾ.ಪಂ.ಗೆ […]