ಶನಿವಾರ ಸಂತೆಗೆ ನಿಷೇಧ: ಜನರಿಲ್ಲದೇ ಬಣಗುಟ್ಟಿದ ಕುಂದಾಪುರದ ಎಪಿಎಂಸಿ ವಠಾರ ಜನತಾ ಕಫ್ರ್ಯೂ ಆತಂಕ: ಮೀನಂಗಡಿಗಳಲ್ಲಿ ಮೀನು ಖರೀದಿ ಬಲುಜೋರು!
ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಕುಂದಾಪುರ: ಕೊರೋನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಜನದಟ್ಟಣೆ ಉಂಟಾಗದಂತೆ ಜಿಲ್ಲಾಧಿಕಾರಿಯವರು ವಿಧಿಸಿರುವ 144(3) ಸೆಕ್ಷನ್ನಿಂದಾಗಿ ಶನಿವಾರ ನಡೆಯಬೇಕಿದ್ದ ಕುಂದಾಪುರ ಸಂತೆ ರದ್ದುಗೊಂಡಿದೆ. ಈ ಬಗ್ಗೆ ಎಪಿಎಂಸಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ ನಾಲ್ಕು ದಿನ ಮುಂಚಿತವಾಗಿಯೇ ಎಲ್ಲಾ ವ್ಯಾಪರಸ್ಥರಿಗೂ ನೋಟೀಸ್ ನೀಡಿದ್ದರಿಂದ ಶನಿವಾರ ಸಂತೆ ನಡೆಯುವ ಕುಂದಾಪುರದ ಎಪಿಎಂಸಿ ವಠಾರ ವ್ಯಾಪಾರಸ್ಥರು-ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿತ್ತು. ಎಲ್ಲೆಲ್ಲೂ ಕೊರೋನಾ ವೈರಸ್ ಭೀತಿ ಎದುರಾಗುತ್ತಿದ್ದಂತೆಯೇ ಸಾರ್ವಜನಿಕ ಸ್ಥಳಗಳಲ್ಲಿ ಜನದಟ್ಟಣೆ ವಿರಳವಾಗಿದ್ದು, […]