ಕುಂದಾಪುರ: ಸರ್ಕಾರಿ ಭೂಮಿಯಲ್ಲಿ ಬೆಂಕಿ, ಸ್ಥಳೀಯ ಯುವಕರ ಸಮಯಪ್ರಜ್ಞೆಗೆ ತಪ್ಪಿತು ಭಾರೀ ದುರಂತ

ಕುಂದಾಪುರ: ಇಲ್ಲಿನ ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಸಮೀಪವಿರುವ ಸರ್ಕಾರಿ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹತ್ತಕ್ಕೂ ಅಧಿಕ ಎಕರೆ ಪ್ರದೇಶ ಬೆಂಕಿಗಾಹುತಿಯಾಗಿದೆ. ಬೆಂಕಿಗೆ ಕಾರಣ ಏನೆಂಬುವುದು ತಿಳಿದುಬಂದಿಲ್ಲ. ಮುಳ್ಳಿಕಟ್ಟೆಯ ಕೊಪ್ಪರಿಗೆಯಲ್ಲಿರುವ ಸುಮಾರು ೨೦ ಎಕರೆ ಸರ್ಕಾರಿ ಭೂಮಿಯಲ್ಲಿ ೧೦ ಎಕರೆಯಷ್ಟು ಜಾಗ ಬೆಂಕಿಗಾಹುತಿಯಾಗಿದೆ. ಈ ಪ್ರದೇಶದಲ್ಲಿ ಗಾಳಿ ಮರಗಳು ಬೆಳೆದಿದ್ದು ಅದರ ಎಲೆಗಳು ಒಣಗಿ ಬಿದ್ದಿದ್ದವು. ಇದೇ ಎಲೆಗೆ ಬೆಂಕಿ ತಗುಲಿದ್ದು, ಬೆಂಕಿಯ ತೀವ್ರತೆ ವ್ಯಾಪಿಸಿದೆ ಎಂದು ಶಂಕಿಸಲಾಗಿದೆ. ಸಂಜೆ ಆರು ಗಂಟೆಯ ಸುಮಾರಿಗೆ ಸಣ್ಣ ಪ್ರಮಾಣದಲ್ಲಿ ಬೆಂಕಿ […]