ಕುಂದಾಪುರ: ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ 

ಕುಂದಾಪುರ: ಕಳೆದ 10 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ವರದಿಯಾಗಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯ ಹಿಂಬದಿಯ ನಿವಾಸಿ ಸುಜಾತ ಪ್ರಭು (68) ಎನ್ನುವವರು, ಮಾನಸಿಕ ಖಿನ್ನತೆ ಹಾಗೂ ತಲೆ ನೋವಿಗಾಗಿ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಗುರುವಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಸಮೀಪದ ವೆಂಕಟೇಶ ಹೆಗ್ಡೆ ಎನ್ನುವವರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಅವರ ಪುತ್ರಿ […]

ನಿರ್ಮಾಣ ಹಂತದ ಬಾವಿಗೆ ಬಿದ್ದು ವ್ಯಕ್ತಿ ಸಾವು

ಕುಂದಾಪುರ: ನಿರ್ಮಾಣ ಹಂತದಲ್ಲಿರುವ ಬಾವಿಗೆ ಆಕಸ್ಮಿಕವಾಗಿ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ಖೇದಕರ ಘಟನೆ ನಾಡಗುಡ್ಡೆಯಂಗಡಿಯ ಜನತಾ ಕಾಲನಿಯಲ್ಲಿ ನಡೆದಿದೆ. ಗುಲ್ವಾಡಿ ಗ್ರಾಮದ ಶೆಟ್ರಕಟ್ಟೆ ನಿವಾಸಿ ಲಕ್ಷ್ಮಣ ಪೂಜಾರಿ (38) ಸಾವನ್ನಪ್ಪಿದ ದುರ್ದೈವಿ. ನಾಡಗುಡ್ಡೆಯಂಗಡಿ ಜನತಾ ಕಾಲನಿ ನಿವಾಸಿ ಲಕ್ಷ್ಮೀ ಪೂಜಾರಿಯವರ ಮನೆಯ ಬಾವಿ ನಿರ್ಮಾಣ ಹಂತದಲ್ಲಿದ್ದು, ಬಾವಿಗೆ ಹಾಕಲಾಗಿದ್ದ ರಿಂಗ್‍ನ ಸುತ್ತಲೂ ಮಣ್ಣು ಹಾಕುವ ಕಾಮಗಾರಿ ನಡೆಯುತ್ತಿತ್ತು. ಈ ವೇಳೆಯಲ್ಲಿ ಲಕ್ಷ್ಮಣ ಪೂಜಾರಿ ಕಾಮಗಾರಿಯನ್ನು ವೀಕ್ಷಿಸುತ್ತಿರುವಾಗ ದುರ್ಘಟನೆ ಸಂಭವಿಸಿದೆ. ಬಾವಿಗೆ ಬಿದ್ದ ಲಕ್ಷ್ಮಣ ಪೂಜಾರಿಯವರನ್ನು ರಕ್ಷಿಸುವ ಪ್ರಯತ್ನ […]

ಕುಂದಾಪುರ: ಬಟ್ಟೆ ಒಗೆಯಲೆಂದು ಹೊಳೆಗೆ ಹೋಗಿದ್ದ ಯುವತಿ ಸಾವನ್ನಪ್ಪಿದ್ದು ದೃಢ

ಕುಂದಾಪುರ: ಬುಧವಾರ ಬೆಳಿಗ್ಗೆ ಬಟ್ಟೆ ಒಗೆಯಲೆಂದು ಹೊಳೆಗೆ ಹೋಗಿದ್ದ ವೇಳೆ ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ಯುವತಿ ಕಾಲು ಜಾರಿ ಹೊಳೆಗೆ ಬಿದ್ದು ಸಾವನ್ನಪ್ಪಿರುವುದು ಇದೀಗ ದೃಢಪಟ್ಟಿದೆ. ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಿಂಜೆ ಗ್ರಾಮದ ಶಾಡಿಗುಂಡಿ ನಿವಾಸಿ ಲಕ್ಷ್ಮಣ ನಾಯ್ಕ ಎಂಬುವರ ಪುತ್ರಿ ಬಿ.ಕಾಂ. ಪದವೀಧರೆ ಅಮಿತಾ ನಾಯ್ಕ್(21) ಎಂಬಾಕೆ ಮೃತ ಯುವತಿಯಾಗಿದ್ದಾಳೆ. ಈಕೆಯ ಮೃತದೇಹ ಗುರುವಾರ ಸಂಜೆ ಅಲ್ಲೇ ಸಮೀಪದ ಹೊಂಡದಲ್ಲಿ ಪತ್ತೆಯಾಗಿದೆ. ಅಮಿತಾ ನಾಯ್ಕ್ ಬುಧವಾರ ಬೆಳಿಗ್ಗೆ ಬಟ್ಟೆ ಒಗೆದು ಬರುತ್ತೇನೆ ಎಂದು […]