ಕುಂದಾಪುರದ ಯುವ ಪತ್ರಕರ್ತ ಹರೀಶ್ ನಿಧನ

ಕುಂದಾಪುರ: ಕುಂದಾಪುರದ ಸ್ಥಳೀಯ ಚಾಲುಕ್ಯ ಪತ್ರಿಕೆಯ ಪತ್ರಕರ್ತನಾಗಿದ್ದ ಹೊಸಾಡು ಕೆಳ ಕುಂಬ್ರಿ ನಿವಾಸಿ ಹರೀಶ್(27) ಅನಾರೋಗ್ಯದಿಂದ ನಿಧನ ಹೊಂದಿದರು. ಹರೀಶ್ ಚಾಲುಕ್ಯದಲ್ಲಿ ಸುದ್ದಿ ಸಂಗ್ರಹ, ಪ್ರಸರಣ ಹಾಗೂ ಜಾಹಿರಾತು ವಿಭಾಗದಲ್ಲಿ ಕಳೆದ ಹಲವು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು. ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಕೂಡ ಆಗಿದ್ದರು. ಕಳೆದ ವಾರದ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಎರಡು ದಿನದ ಹಿಂದೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಬಹು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆ ಫಲಿಸದೆ […]