ಕುಂದಾಪುರ ಫ್ಲೈಓವರ್: ಮತ್ತೆ ಕಾಮಗಾರಿ ಕೈಗೆತ್ತಿಕೊಂಡ ನವಯುಗ

ಕುಂದಾಪುರ: ಕಳೆದ ಹಲವು ತಿಂಗಳುಗಳಿಂದ ಕಾಮಗಾರಿ ನಡೆಸದೇ ನೆನಗುದಿಗೆ ಬಿದ್ದಿದ್ದ ಕುಂದಾಪುರ ಫ್ಲೈ ಓವರ್ ಕಾಮಗಾರಿಯನ್ನು ನವಯುಗ ಗುತ್ತಿಗೆ ಕಂಪೆನಿ ಮತ್ತೆ ಪ್ರಾರಂಭಿಸಿದೆ. ಇಲ್ಲಿನ ನಕ್ಷತ್ರ ಜ್ಯೂವೆಲ್ಲರ್‍ಸ್ ಎದುರಿನ ಫ್ಲೈಓವರ್ ಏಂಬ್ಯಾಕ್‌ಮೆಂಟ್ ಕಾಮಗಾರಿಯನ್ನು ಆರಂಭಿಸಿರುವ ನವಯುಗ ಕಂಪೆನಿ ಮಣ್ಣನ್ನು ಸಮತಟ್ಟುಗೊಳಿಸುವಲ್ಲಿ ಮುಂದಾಗಿದೆ. ಕುಂದಾಪುರ ಫ್ಲೈಓವರ್ ವಿಳಂಬ ಕಾಮಗಾರಿಯನ್ನು ವಿರೋಧಿಸಿ ಶೀಘ್ರವೇ ಕಾಮಗಾರಿ ಮುಗಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಸೋಮವಾರ ಬೃಹತ್ ಪ್ರತಿಭಟನಾ ಧರಣಿ ನಡೆಸಿತ್ತು. ಆ ವೇಳೆಯಲ್ಲಿ ಸ್ಥಳಕ್ಕಾಗಮಿಸಿದ ನವಯುಗ ಅಧಿಕಾರಿಗಳು ಎರಡು ದಿನಗಳೊಳಗೆ ಕಾಮಗಾರಿ […]