ಕುಂದಾಪುರ: ತಾಯಿಯ ಸಾವಿನ ಸುದ್ದಿ ಕೇಳಿ ಮಗನಿಗೂ ಹೃದಯಾಘಾತ

ಕುಂದಾಪುರ: ತಾಯಿ ಹೃದಯಾಘಾತದಿಂದ ಮೃತಪಟ್ಟ ಸುದ್ದಿ ತಿಳಿದು ಕೇವಲ ಒಂದು ಗಂಟೆಯೊಳಗೆ ಮಗನೂ ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಕುಂದಾಪುರದಲ್ಲಿ ಶುಕ್ರವಾರ ತಡರಾತ್ರಿ ವರದಿಯಾಗಿದೆ. ಇಲ್ಲಿನ ಸರ್ಕಾರಿ ತಾಲೂಕು ಆಸ್ಪತ್ರೆಯ ಬಳಿಯಲ್ಲಿನ ಮಹಾರಾಜ್ ಜುವೆಲ್ಲರ್ಸ್‍ನ ಮಾಲಿಕರಾಗಿದ್ದ ದಿ.ರಮೇಶ್ ಶೇಟ್ ಅವರ ಪತ್ನಿ ಶಕುಂತಲಾ ಶೇಟ್(82) ಶುಕ್ರವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದರು. ಇದಾದ ಒಂದು ಗಂಟೆಯ ಅವಧಿಯಲ್ಲಿ ಅವರ ಪುತ್ರ ಪ್ರಶಾಂತ್ ಶೇಟ್(45) ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಕುಂತಲಾ ಅವರಿಗೆ 4 ಗಂಡು ಹಾಗೂ 2 ಪುತ್ರಿಯರಿದ್ದು, ಅವರು ಗಂಡು […]

ಕುಂದಾಪುರ: ಬಾವಿಗೆ ಬಿದ್ದು ವ್ಯಕ್ತಿ ಸಾವು

ಕುಂದಾಪುರ: ಮನೆ ಸಮೀಪದ ಬಾವಿಗೆ ಆಯ ತಪ್ಪಿ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮದ ಗುಡ್ಡಮ್ಮಾಡಿಯಲ್ಲಿ ನಡೆದಿದೆ. ಗುಡ್ಡಮ್ಮಾಡಿ ನಿವಾಸಿ ವಾಲ್ಟರ್ ಡಿ ಅಲ್ಮೇಡಾ(52) ಮೃತ ದುರ್ದೈವಿ. ಸಹೋದರನ ಕಾಪಾಡಲು ಬಾವಿಗೆ ಇಳಿದ ಅಲ್ಬನ್ ಅಲ್ಮೆಡಾ ಅಸ್ವಸ್ಥಗೊಂಡು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ವಿವರ: ಕಳೆದ ಕೆಲ ತಿಂಗಳ ಹಿಂದೆ ತೋಡಿರುವ 20 ಅಡಿ ಆಳದ 5 ಅಡಿ ಅಗಲವಿರುವ ಬಾವಿಗೆ ಇಂದು ಬೆಳಿಗ್ಗೆ ವಾಲ್ಟರ್ ಅಲ್ಮೇಡಾ ಆಯತಪ್ಪಿ […]