ಕುಂದಾಪುರ-ಉಡುಪಿ ಬಸ್ ಸಂಚಾರಕ್ಕೆ ಜಿಲ್ಲಾಡಳಿತದಿಂದ ಗ್ರೀನ್ ಸಿಗ್ನಲ್
ಕುಂದಾಪುರ: ಲಾಕ್‍ಡೌನ್‍ನಿಂದಾಗಿ ಕಳೆದ ತಿಂಗಳುಗಳಿಂದ ನಿರ್ಬಂಧ ಹೇರಿದ್ದ ಬಸ್ ಸಂಚಾರಕ್ಕೆ ಕೊನೆಗೂ ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ಕೊಟ್ಡಿದೆ. ನಗರದಲ್ಲಿ ಬುಧವಾರ ಕೆಲ ಖಾಸಗಿ ಹಾಗೂ ಸರ್ಕಾರಿ ಬಸ್‍ಗಳು ರಸ್ತೆಗಿಳಿದಿದ್ದು, ಜನಸಂಚಾರಕ್ಕೆ ಅನುವುಮಾಡಿಕೊಟ್ಟಿದೆ. ಬುಧವಾರ ಬೆಳಿಗ್ಗೆಯಿಂದಲೇ ರಸ್ತೆಗಿಳಿದ ಕೆಲ ಸರ್ಕಾರಿ ಹಾಗೂ ಖಾಸಗಿ ಬಸ್‍ಗಳು ಉಡುಪಿಯತ್ತ ತೆರಳಿದೆ. ಸಾರ್ವಜನಿಕರ ಓಡಾಟ ಕಡಿಮೆ ಇರುವ ಹಿನ್ನೆಲೆ ಬಸ್‍ಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಭಾರತಿ ಸಂಸ್ಥೆಯ ಆರು ಬಸ್‍ಗಳು ಬಿಟ್ಟರೆ ಬೇರಾವುದೇ ಖಾಸಗಿ ಬಸ್‍ಗಳು ರಸ್ತೆಗಿಳಿದಿಲ್ಲ. ಪ್ರಯಾಣಿಕರ ಸಂಖ್ಯೆ ಭಾರೀ ಇಳಿಮುಖವಾದ ಹಿನ್ನೆಲೆ […]