ಜುಲೈ 28 ರಂದು ಕೈತೋಟ ತರಬೇತಿ ಕಾರ್ಯಕ್ರಮ

ಮಂಗಳೂರು: ಸಿರಿ ತೋಟಗಾರಿಕೆ ಸಂಘ (ರಿ) (ತೋಟಗಾರಿಕೆ ಇಲಾಖೆಯ ಅಂಗ ಸಂಸ್ಥೆ), ತೋಟಗಾರಿಕೆ ಜಂಟಿ ನಿರ್ದೇಶಕರ ಕಛೇರಿ ಆವರಣ, ಬೆಂದೂರು, ಮಂಗಳೂರು ಇದರ ವತಿಯಿಂದ ಕೈತೋಟ ತರಬೇತಿ ಕಾರ್ಯಕ್ರಮವನ್ನು ಜುಲೈ 28 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ರವರೆಗೆ ಬೆಂದೂರು ತೋಟಗಾರಿಕೆ ಜಂಟಿ ನಿರ್ದೇಶಕರ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ತರಬೇತಿ ಕಾರ್ಯಕ್ರಮದಲ್ಲಿ ಪಾಟಿಂಗ್, ರೀಪಾಟಿಂಗ್, ಕಸಿ ಕಟ್ಟುವುದು (ಗ್ರಾಪ್ಟಿಂಗ್, ಬಡ್ಡಿಂಗ್, ಲೇಯರಿಂಗ್), ಸಾವಯವ ಗೊಬ್ಬರ ತಯಾರಿ, ತಾರಸಿ ಕೃಷಿಯ ಕುರಿತು ತರಬೇತಿ […]
“ನಥಿಂಗ್” ಅನ್ನೋ ಹಾಗಿಲ್ಲ ಈ ಮೊಬೈಲ್ ನಲ್ಲಿದೆ ಎವೆರಿಥಿಂಗ್: ಫೋನ್ (4ಬಿ) ಸ್ಮಾರ್ಟ್‍ಫೋನ್

ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ವಿಶಿಷ್ಟ ವಿನ್ಯಾಸ ಹಾಗೂ ತಂತ್ರಜ್ಞಾನದ ಮೂಲಕ ಗಮನ ಸೆಳೆದಿರುವ ಲಂಡನ್ ಮೂಲದ ಗ್ರಾಹಕ ತಂತ್ರಜ್ಞಾನ ಸಂಸ್ಥೆಯಾದ ಬ್ರ್ಯಾಂಡ್ ನಥಿಂಗ್, ತನ್ನ ಬಹುನಿರೀಕ್ಷಿತ ಫೋನ್ (4ಬಿ) ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ನಥಿಂಗ್ ತಂತ್ರಜ್ಞಾನದ ಹೊಸ ಅನುಭವವನ್ನು ನೀಡಲು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಹಿಂದೆ ಮಾರುಕಟ್ಟೆಯಲ್ಲಿ ಭಾರಿ ಯಶಸ್ಸು ಕಂಡಿದ್ದ ಫೋನ್ (4ಎ) ಸರಣಿಯ ಮುಂದುವರಿದ ಭಾಗವಾಗಿ ಇದನ್ನು ಪರಿಚಯಿಸಲಾಗಿದೆ. ಕಂಪನಿಯ ಸಿಗ್ನೇಚರ್ ವಿನ್ಯಾಸ, ದೈನಂದಿನ ಶಕ್ತಿಯುತ ಕಾರ್ಯಕ್ಷಮತೆ, […]
ಪ್ಲಾಸ್ಟಿಕ್ ಚೀಲಕ್ಕೆ ಹೇಳಿ ಗುಡ್ ಬೈ… ಪರಿಸರ ಕಾಳಜಿ ನಮ್ಮಿಂದ ಆರಂಭವಾಗಲಿ

ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನ: ಇಂದು ಒಂದು ಚೀಲ ಬದಲಿಸಿದರೆ, ನಾಳೆ ಒಂದು ಭೂಮಿ ಉಳಿಯುತ್ತದೆ. ನಿಮ್ಮ ಮಕ್ಕಳ ಭವಿಷ್ಯವನ್ನು ಯೋಚಿಸಿಯಾದರೂ ಪ್ಲಾಸ್ಟಿಕ್ ಬಳಕೆ ತ್ಯಜಿಸಿ. ಮಕ್ಕಳಿಗೆ ಜನ್ಮ ನೀಡುವುದು ಮಾತ್ರ ಕರ್ತವ್ಯವಲ್ಲ. ಮಕ್ಕಳಿಗೋಸ್ಕರ ಪರಿಸರ, ಗಾಳಿ ಶುದ್ಧವಾಗಿಡುವುದೂ ನಮ್ಮ ಮುಖ್ಯ ಕರ್ತವ್ಯ. ಪ್ರತಿ ವರ್ಷ ಜುಲೈ 3ರಂದು ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನ (International Plastic Bag Free Day)ವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಪ್ಲಾಸ್ಟಿಕ್ ಚೀಲಗಳ ಅತಿಯಾದ ಬಳಕೆಯಿಂದ ಪರಿಸರ, ಜಲಚರಗಳು, ಪ್ರಾಣಿಗಳು […]
ಮಂಗಳೂರು ವಿವಿ ಅತಿಥಿ ಉಪನ್ಯಾಸಕರ ಹುದ್ದೆ : ಅರ್ಜಿ ಆಹ್ವಾನ

ಮಂಗಳೂರು: 2026-27ನೇ ಶೈಕ್ಷಣಿಕ ಸಾಲಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳಾದ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು /ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜು ಮಂಗಳಗಂಗೋತ್ರಿ/ವಿಶ್ವವಿದ್ಯಾನಿಲಯ ಕಾಲೇಜು, ನೆಲ್ಯಾಡಿ ಮತ್ತು ವಿಶ್ವವಿದ್ಯಾನಿಲಯ ಕಾಲೇಜು, ಬನ್ನಡ್ಕ ಮೂಡಬಿದಿರೆ, ಇಲ್ಲಿಯ ಪದವಿ ಕಾರ್ಯಕ್ರಮದ ಇಂಗ್ಲಿಷ್, ಕನ್ನಡ, ಹಿಂದಿ, ಸಂಸ್ಕೃತ, ಇತಿಹಾಸ, ಎಕೊನಾಮಿಕ್ಸ್, ರಾಜ್ಯಶಾಸ್ತ್ರ, ಜಿಯೋಗ್ರಾಫಿ, ಕೆಮಿಸ್ಟ್ರಿ, ಗಣಿತ, ಮೈಕ್ರೊಬಯೋಲಜಿ, ಕಂಪ್ಯೂಟರ್ ಸೈನ್ಸ್/ಬಿ.ಸಿ.ಎ, ಬಾಟನಿ, ಪ್ರಾಣಿಶಾಸ್ತ್ರ, ಕಾಮರ್ಸ್ ಆ್ಯಂಡ್ ಮ್ಯಾನೇಜ್‍ಮೆಂಟ್, ದೈಹಿಕ ಶಿಕ್ಷಣ, ಪತ್ರಿಕೋದ್ಯಮ, ಟೂರಿಸಂ ಆ್ಯಂಡ್ ಟ್ರಾವೆಲ್ ಮ್ಯಾನೇಜ್‍ಮೆಂಟ್ ವಿಷಯಗಳಿಗೆ ಅಗತ್ಯವಿರುವ ಅತಿಥಿ ಉಪನ್ಯಾಸಕರ […]
ಗೌಡ ಸಾರಸ್ವತ ಸಮಾಜದ ವಧು-ವರರ ಅನ್ವೇಷಣೆ ಆಹ್ವಾನ

ಉಡುಪಿ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ವಧು-ವರರ ಅನ್ವೇಷಣೆಗೆ ಆಹ್ವಾನಿಸಲಾಗಿದೆ ಎಂದು ದಾವಣಗೆರೆಯ ಗೌಡ ಸಾರಸ್ವತ ಸಮಾಜದ ನಿಕಟಪೂರ್ವ ಅಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. 2026ರ ಆಗಸ್ಟ್ 23 ರಂದು ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಾಯ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಕಿಲ್ಪಾಡಿಯಲ್ಲಿ ಸಮಾಜದ ವಧು-ವರರ ಅನ್ವೇಷಣೆ ಸಂಬಂಧ ವೈವಾಹಿಕ ಸಮಾವೇಶ ನಡೆಯಲಿದೆ. ಹೆಸರು ನೊಂದಾಯಿಸುವ ಕೊನೆಯ ದಿನಾಂಖ 01-08-2026 ಅಂದು ಉಪಹಾರ, ಭೋಜನದ ವ್ಯವಸ್ಥೆ ಇರುತ್ತದೆ. […]