ಕುಂದಾಪುರ: ದೇವಸ್ಥಾನದ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

ಕುಂದಾಪುರ: ಗಂಡನ ಅನಾರೋಗ್ಯದ ವಿಚಾರದಲ್ಲಿ ಮನನೊಂದ ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ವಕ್ವಾಡಿ ಗ್ರಾಮದ ನಂದಿಕೇಶ್ವರ ದೇವಸ್ಥಾನದ ಬಳಿ ಇಂದು ನಡೆದಿದೆ. ಕುಂದಾಪುರ ವಕ್ವಾಡಿ ಗ್ರಾಮದ ಹೆಗ್ಗಾರಬೈಲುವಿನ ಸರಸ್ವತಿ ಶೆಟ್ಟಿ (39) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇವರ ಪತಿ ಕಿಡ್ನಿ ಖಾಯಿಲೆಯಿಂದ ಬಳಲುತ್ತಿದ್ದರು. ಇದರಿಂದ ಮನನೊಂದ ಸರಸ್ವತಿ ಅವರು ನ.6ರ ಬೆಳಿಗ್ಗೆ 5.30ರ ಸುಮಾರಿಗೆ ಮನೆಯವರಿಗೆ ತಿಳಿಸದೆ ಮನೆಯಿಂದ ಹೊರಗೆ ಹೋಗಿದ್ದರು. ಮನೆಯವರು ಹುಡುಕಾಟ ನಡೆಸಿದಾಗ ಬೆಳಿಗ್ಗೆ 10.45ರ ಸುಮಾರಿಗೆ ಮನೆಯ ಸಮೀಪದ […]