ಕುಂದಾಪುರ: ಸ್ಟುಡಿಯೋ ಕಳ್ಳತನ ಪ್ರಕರಣ; ಕಳ್ಳನ ಮುಖಚಹರೆ ಸಿಸಿಟಿವಿಯಲ್ಲಿ ಸೆರೆ
ಕುಂದಾಪುರ: ಇಲ್ಲಿನ ಹೊಸ ಬಸ್ ನಿಲ್ದಾಣ ಸಮೀಪ ಮುಖ್ಯರಸ್ತೆಯಲ್ಲಿರುವ ಸೈಂಟ್ ಅಂತೋನಿ ಸ್ಟುಡಿಯೋದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟುಡಿಯೋದ ಸಿಸಿಟಿವಿಯಲ್ಲಿ ಕಳ್ಳನ ಚಲನವಲನ ಸೆರೆಯಾಗಿದೆ. ರಾತ್ರಿ ಸುಮಾರು 12.30ರ ಆಸುಪಾಸು ಸ್ಟುಡಿಯೋದ ಹಿಂಬದಿ ಮೇಲ್ಛಾವಣಿಯ ಹಂಚುಗಳನ್ನು ಸರಿಸಿ ಒಳ ಪ್ರವೇಶಿಸಿದ ಕಳ್ಳ ಡ್ರಾವರ್ ನಲ್ಲಿದ್ದ ಸುಮಾರು 2ಸಾವಿರದಷ್ಟು ನಗದು ಹಾಗೂ ಒಂದೆರಡು ಪೆನ್ ಡ್ರೈವ್ ಗಳನ್ನು ದೋಚಿದ್ದಾನೆ. ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡೊಂದನ್ನು ಮಾಡಿನ ಮೇಲೆ ಬಿಟ್ಟು ಹೋಗಿದ್ದಾನೆ. ಸ್ಟುಡಿಯೋದಲ್ಲಿ ಆಳವಡಿಸಿರುವ ಸಿಸಿ ಫೂಟೇಜ್ ನಲ್ಲಿ […]