ಪ್ರಧಾನಿ ಜತೆಗಿನ ‘ಪರೀಕ್ಷಾ ಪೇ ಚರ್ಚಾ’ ಸಂವಾದಕ್ಕೆ ಕುಂದಾಪುರದ ವಿದ್ಯಾರ್ಥಿನಿ ಆಯ್ಕೆ
ಕುಂದಾಪುರ: ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುವ ‘ಪರೀಕ್ಷಾ ಪೇ ಚರ್ಚಾ’ ಸಂವಾದ ಕಾರ್ಯಕ್ರಮಕ್ಕೆ ಕುಂದಾಪುರ ಆರ್ಡಿ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಅನುಷಾ ಅವರು ಆಯ್ಕೆಯಾಗಿದ್ದಾರೆ. ದೇಶದಲ್ಲಿ 1,500 ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮ ವೀಕ್ಷಿಸಲು ಆಯ್ಕೆಯಾಗಿದ್ದಾರೆ. ಇದರಲ್ಲಿ ಕೇವಲ 30 ವಿದ್ಯಾರ್ಥಿಗಳು ಮಾತ್ರ ಪ್ರಧಾನಿ ಜತೆಗೆ ಮಾತನಾಡಲಿದ್ದು, ಅದರಲ್ಲಿ ಅನುಷಾ ಕೂಡ ಅವಕಾಶ ಪಡೆದಿದ್ದಾಳೆ. ದೇಶದ ವಿವಿಧೆಡೆಯಿಂದ 10.39 ಲಕ್ಷ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರು. […]