ಕುಂದಾಪುರ: ರಿವಾಲ್ವರ್ ತೋರಿಸಿ ಮೊಬೈಲ್ ಅಂಗಡಿ ಮಾಲೀಕನಿಂದ ಲಕ್ಷಾಂತರ ರೂಪಾಯಿ ಸುಲಿಗೆಗೈದ ದುಷ್ಕರ್ಮಿಗಳು
ಕುಂದಾಪುರ: ಮೊಬೈಲ್ ಅಂಗಡಿ ಮಾಲೀಕನಿಗೆ ದುಷ್ಕರ್ಮಿಗಳ ತಂಡವೊಂದು ರಿವಾಲ್ವರ್ ತೋರಿಸಿ ಲಕ್ಷಾಂತರ ರೂಪಾಯಿ ನಗದು ಹಾಗೂ ಸೊತ್ತುಗಳನ್ನು ಸುಲಿಗೆ ಮಾಡಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ. ಬೈಂದೂರಿನ ಮುಸ್ತಾಫ್ ಎಂಬವರು ನಗದು ಹಾಗೂ ಸೊತ್ತು ಕಳೆದುಕೊಂಡ ಮೊಬೈಲ್ ಅಂಗಡಿ ಮಾಲೀಕ. ಇವರು ಎಂದಿನಂತೆ ಸೆ.17ರಂದು ರಾತ್ರಿ ಶಾಪ್ ಬಂದ್ ಮಾಡಿ ಕುಂದಾಪುರದ ಫ್ಲ್ಯಾಟ್ ಗೆ ಹೋಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಮೂವರೊಂದಿಗೆ ಬಂದ ಮುಕ್ತಾರ್ ಎಂಬಾತ ಮುಸ್ತಾಫ್ ನನ್ನು ಅಡ್ಡಗಟ್ಟಿ ಕಾರಿನೊಳಗೆ ಎಳೆದೊಯ್ದಿದ್ದು, ಬಂದೂಕು ತೋರಿಸಿ ಬೆಂಗಳೂರಿಗೆ ಕರೆದುಕೊಂಡು […]