ಕುಂದಾಪುರ: ಯುವತಿಗೆ ಚೂರಿಯಿಂದ ಇರಿದು ಬಳಿಕ ಆತ್ಮಹತ್ಯೆಗೆ ಶರಣಾದ ಪಾಗಲ್ ಪ್ರೇಮಿ; ಘಟನೆಯ ಫುಲ್ ಡಿಟೇಲ್ಸ್ ಇಲ್ಲಿದೆ..!
ಕುಂದಾಪುರ: ಭಗ್ನ ಪ್ರೇಮಿಯೊಬ್ಬ ಯುವತಿಗೆ ಚೂರಿ ಇರಿದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ಸಮೀಪದ ಶಿರಿಯಾರ ರಾಮಮಂದಿರ ಬಳಿ ಇಂದು ಸಂಜೆ ನಡೆದಿದೆ. ಅದೃಷ್ಟವಶಾತ್ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ರಿಕ್ಷಾ ಚಾಲಕ ರಾಘವೇಂದ್ರ ಕುಲಾಲ್(35) ಎಂಬಾತ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಇಂದು ಸಂಜೆ ಶಿರಿಯಾರ ರಾಮಮಂದಿರ ಬಳಿ ಯುವತಿಗೆ ಚೂರಿ ಇರಿದಿದ್ದಾನೆ. ಬಳಿಕ ಹೆಸ್ಕೂತ್ತೂರಿನ ಹಾರ್ಯಾಡಿಯಲ್ಲಿ ಬಳಿ ತಾನೂ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ರಾಘವೇಂದ್ರ ಕುಲಾಲ್ ಕಳೆದ ಕೆಲವು ತಿಂಗಳಿನಿಂದ ಶಿರಿಯಾರದ […]