ಕುಂದಾಪುರ: ಶೀಲ ಶಂಕಿಸಿ ಪತ್ನಿಯ ಕೊಲೆಗೆ ಯತ್ನಿಸಿದ ಆರೋಪಿ ಪತಿಗೆ 7 ವರ್ಷ ಶಿಕ್ಷೆ
ಕುಂದಾಪುರ: ಕಳೆದ ನಾಲ್ಕು ವರ್ಷಗಳ ಹಿಂದೆ ಗಂಗೊಳ್ಳಿಯ ತ್ರಾಸಿ ಎಂಬಲ್ಲಿ ಶೀಲ ಶಂಕಿಸಿ ಪತ್ನಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪತಿಗೆ ಕುಂದಾಪುರದ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಮೂಲತಃ ಗಂಗೊಳ್ಳಿ ತ್ರಾಸಿಯ ಚಂದ್ರ ಪೂಜಾರಿ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತನು ಪತ್ನಿಯೊಂದಿಗೆ ಪೂನಾದಲ್ಲಿ ವಾಸಿಸುತ್ತಿದ್ದನು. ಪತ್ನಿ ಚೊಚ್ಚಲ ಹೆರಿಗೆಗೆ ಊರಿಗೆ ಬಂದಿದ್ದಳು. ಆ ನಂತರ […]