ಕುಂದಾಪುರ: ರೈಲು ಬಡಿದು ನಾಲ್ಕು ವರ್ಷದ ಕಪ್ಪು ಚಿರತೆ ಸಾವು

ಕುಂದಾಪುರ: ರೈಲು ಡಿಕ್ಕಿ ಹೊಡೆದು ನಾಲ್ಕು ವರ್ಷದ ಕಪ್ಪು ಚಿರತೆ ಮೃತಪಟ್ಟ ಘಟನೆ ಬೈಂದೂರು ತಾಲೂಕು ನಾಡಾ ಗ್ರಾಮದ ಬಡಾಕೆರೆ ರೈಲ್ವೆ ಮೇಲ್ಸೇತುವ ಬಳಿ ಮಂಗಳವಾರ ಮುಂಜಾನೆ ನಡೆದಿದೆ. ಆಹಾರ ಹುಡುಕಿಕೊಂಡು ಚಿರತೆ ರೈಲ್ವೆ ಮೇಲ್ಸೇತುವೆ ಬಳಿ ಬಂದಿದ್ದು, ಈ ವೇಳೆ ರೈಲಿಗೆ ಸಿಲುಕಿ ಸಾವನ್ನಪಿದೆ ಎನ್ನಲಾಗಿದೆ. ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಸಿಬ್ಬಂದಿ ಚಿರತೆ ಶವ ವಶಕ್ಕೆ ಪಡೆದು ವನ್ಯಜೀವಿ ನಿಯಮದ ಪ್ರಕಾರ ಅಂತಿಮ ಸಂಸ್ಕಾರ ಮಾಡಿದರು.