ಕುಂದಾಪುರ: ನೂರಾರು ಜನರ ಜೀವ ಉಳಿಸಿದ್ದ ರಕ್ತದಾನಿಗೆ ಬೇಕಿದೆ ನೆರವಿನ ಹಸ್ತ.!

ಕುಂದಾಪುರ: ಅಪಘಾತ, ಹೆರಿಗೆ ಮತ್ತು ಯಾವುದೇ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಎದುರಾದಾಗ, ಅಂಥವರಿಗೆ ಆಪತ್ಭಾಂಧವನಾಗಿ ರಕ್ತದಾನ ಮಾಡುತ್ತಿದ್ದ ಶಾಂತರಾಮ್ ಸ್ವತಃ ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಕುಂದಾಪುರ ತಾಲೂಕಿನ ಬಿದ್ಕಲ್ಕಟ್ಟೆಯ ಶಾಂತರಾಮ ಅವರು ದೇವಸ್ಥಾನವೊಂದರಲ್ಲಿ ಭದ್ರತಾ ಸಿಬ್ಬಂದಿ ಆಗಿ ಜೀವನ ಸಾಗಿಸುತ್ತಿದ್ದವರು. ಇದು ಬಿಟ್ಟರೆ ಅವರಿಗೆ ಬೇರೆ ಯಾವುದೇ ಆದಾಯ ಮೂಲಗಳಿಲ್ಲ. ಇವರ ದುಡಿಮೆಯಿಂದಲೇ ಸಂಸಾರದ ರಥ ಸಾಗುತ್ತಿತ್ತು.ಆದರೆ ಅನೇಕರಿಗೆ ಆಪದ್ಭಾಂಧವನಾಗಿ ನೆರವು ಮಾಡಿದ ಇವರಿಗೆ ವಿಧಿ ಕರುಣೆ ತೋರಲಿಲ್ಲ. ಕೇವಲ 39 ವರ್ಷದ ಸಣ್ಣ ಪ್ರಾಯದಲ್ಲಿ […]