ಕುಂದಾಪುರ: ನ್ಯೂಯರ್ ಪಾರ್ಟಿಗೆ ಗಾಂಜಾ ಸಾಗಿಸುತ್ತಿದ್ದ ಆರೋಪಿಯ ಬಂಧನ; 1 ಕೆ.ಜಿ. ಗಾಂಜಾ ವಶ
ಕುಂದಾಪುರ: ಹೊಸ ವರ್ಷದ ಪಾರ್ಟಿಗೆ ಗಾಂಜಾ ಸಾಗಿಸುತ್ತಿದ್ದ ಆರೋಪಿಯೋರ್ವನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 1 ಕೆ.ಜಿ ತೂಕದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಕುಂದಾಪುರ ವಿಠಲವಾಡಿ ಮೂಲದ ವಿಶ್ವಪ್ರಸನ್ನ ಗೋಡೆ (26) ಬಂಧಿತ ಆರೋಪಿ. ಈತ ಹೊಸ ವರ್ಷದಲ್ಲಿ ಮೋಜು ಮಸ್ತಿ ಮಾಡಲು ಹೈದರಾಬಾದ್‌ನಿಂದ ಕುಂದಾಪುರಕ್ಕೆ ಬಸ್ ಮೂಲಕವಾಗಿ ಗಾಂಜಾ ತರುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಕುಂದಾಪುರ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ನೇತೃತ್ವದ ಪೊಲೀಸರ ತಂಡಕ್ಕೆ ಖಚಿತ ಮಾಹಿತಿ ಲಭಿಸಿದೆ. ಇದರ ಆಧಾರದಲ್ಲಿ ಡಿ.24ರ ತಡರಾತ್ರಿ […]