ಕುಂದಾಪುರ: ಮೊಬೈಲ್ ಆ್ಯಪ್ ನಲ್ಲಿ ಪಡೆದ ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ
ಕುಂದಾಪುರ: ಆ್ಯಪ್ ಮೂಲಕ ಪಡೆದ ಸಾಲ ಮರುಪಾವತಿಸಲಾಗದೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಮ್ಮಾಡಿಯ ಹರೆಗೋಡುವಿನಲ್ಲಿ ಎಂಬಲ್ಲಿ ನಡೆದಿದೆ. ಹೆಮ್ಮಾಡಿಯ ಹರೆಗೋಡು ಕೊಳಹಿತ್ಲು ನಿವಾಸಿ ಸಂಜೀವ ದೇವಾಡಿಗ ಹಾಗೂ ಕನಕ ಎಂಬವರ ಪುತ್ರ ವಿಘ್ನೇಶ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಎಮ್ಎನ್ಸಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದನು. ಬುಧವಾರ ರಾತ್ರಿ ಊಟ ಮಾಡಿ ಮಲಗಿದ್ದ ವಿಘ್ನೇಶ್ ಇಂದು ನಸುಕಿನ ಜಾವ ಐದು ಗಂಟೆಯ ಸುಮಾರಿಗೆ ಮನೆ ಎದುರಿನ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಘ್ನೇಷ್ ತಾಯಿ […]