ಭಂಡಾರ್ಕಾರ್ಸ್ ಕಾಲೇಜು: ಎನ್.ಸಿ.ಸಿ ಆರ್ಮಿ ಕೆಡೆಟ್ ಗಳು ಥಲ್ ಸೈನಿಕ್ ಶಿಬಿರದಲ್ಲಿ ಭಾಗಿ

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಎನ್.ಸಿ.ಸಿ ಆರ್ಮಿ ಕೆಡೆಟ್ ಗಳಾದ ಎಸ್.ಯು.ಒ.ರಂಜಿತ್ ಹಾಗೂ ಜೆ.ಯು.ಒ ಆನ್ಸ್ಟನ್ ಇಮ್ಯಾನ್ಯುಯಲ್ ರೆಬೆಲ್ಲೊ  ಸೆಪ್ಟೆಂಬರ್ 14 ರಿಂದ ಸೆಪ್ಟೆಂಬರ್ 25 ರವರೆಗೆ ದೆಹಲಿಯಲ್ಲಿ ನಡೆಯಲಿರುವ “ಥಲ್ ಸೈನಿಕ್ ಶಿಬಿರ”ದಲ್ಲಿ ಭಾಗವಹಿಸುತ್ತಿದ್ದಾರೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗ ಅಭಿನಂದನೆಗಳನ್ನು ತಿಳಿಸಿದ್ದಾರೆ. ಇವರಿಗೆ ಕಾಲೇಜಿನ ಎನ್ ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಅಂಜನ್ ಕುಮಾರ್ ಎಂ.ಎಲ್ ತರಬೇತಿ ನೀಡಿದ್ದರು.    

ಚೆಸ್ ಮತ್ತು ಈಟಿ ಎಸೆತ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪ.ಪೂ ಕಾಲೇಜು ವಿದ್ಯಾರ್ಥಿಗಳ ಸಾಧನೆ: ರಾಜ್ಯಮಟ್ಟಕ್ಕೆ ಆಯ್ಕೆ

ಕುಂದಾಪುರ: ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ, ಉಡುಪಿ ಜಿಲ್ಲೆ ಮತ್ತು ಶ್ರೀ ಮೂಕಾಂಬಿಕ ಸ್ವತಂತ್ರ ಪದವಿ ಪೂರ್ವ ಕಾಲೇಜು ಕೊಲ್ಲೂರು ಇವರ ಜಂಟಿ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅನಿರುದ್ಧ್ ಶೇಟ್ ಹಾಗೂ ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೆಶನ್ ಆಯೋಜಿಸಿದ ಜೂನಿಯರ್ ವಿಭಾಗದ ಈಟಿ ಎಸೆತದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ […]

ಜೆಇಇ ಮೈನ್ಸ್ ಪರೀಕ್ಷೆ: ಕುಂದಾಪುರ ಶ್ರೀ ವೆಂಕಟರಮಣ ಕಾಲೇಜಿನ 6 ವಿದ್ಯಾರ್ಥಿಗಳು 90 ಕ್ಕಿಂತ ಅಧಿಕ ಪರ್ಸೆಂಟೈಲ್ ಗಳಿಕೆ

ಕುಂದಾಪುರ: ರಾಷ್ಟ್ರ ಮಟ್ಟದಲ್ಲಿ ಜರುಗಿದ 2022 ನೇ ಸಾಲಿನ ಜೆಇಇ ಮೈನ್ಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ 6 ವಿದ್ಯಾರ್ಥಿಗಳು 90 ಕ್ಕಿಂತ ಅಧಿಕ ಪರ್ಸೆಂಟೈಲ್ ದಾಖಲಿಸಿದ್ದಾರೆ. ಕೀರ್ತನ್‌ಕಿಣಿ 95.75 ಪರ್ಸೆಂಟೈಲ್, ಮೊಗವೀರ್ ಸಾಹಿಲ್ ಶೇಖರ್ 93.63 ಪರ್ಸೆಂಟೈಲ್, ಅಮೋಘ ಕಾರಂತ್ 92.7 ಪರ್ಸೆಂಟೈಲ್ , ನಂದನ್ ಪೈ 91.26 ಪರ್ಸೆಂಟೈಲ್,ಪ್ರಣವ್.ಎಸ್.ಜೋಗಿ 91.12 ಪರ್ಸೆಂಟೈಲ್, ಕಾರ್ತಿಕ ಐತಾಳ್ 90.94 ಪರ್ಸೆಂಟೈಲ್‌ ಗಳಿಸಿದ್ದಾರೆ. ಉತ್ತಮ ಫಲಿತಾಂಶ ಪಡೆದಿರುವ ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, […]