ಪ್ರಯಾಗದ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪ್ರಧಾನಿ ಮೋದಿ
ಪ್ರಯಾಗರಾಜ್: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕುಂಭಮೇಳದಲ್ಲಿ ಭಾಗವಹಿಸಿ ಗಂಗಾನದಿಗೆ ಗಂಗಾರತಿ ಮಾಡಿದ ಪ್ರಧಾನಿ ಮೋದಿ, ಪೌರ ಕಾರ್ಮಿಕರ ಪಾದತೊಳೆದದ್ದು ವಿಶೇಷವಾಗಿತ್ತು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆಗೆ ಆಗಮಿಸಿದ ಮೋದಿ, ಗಂಗಾ ನದಿಯಲ್ಲಿ ಪುಣ್ಯಸ್ನಾನವನ್ನೂ ಮಾಡಿದರು. ಇದಾದ ನಂತರ ಸಂಗಂ ಘಾಟ್ ನಲ್ಲಿ ಗಂಗಾನದಿಗೆ ಪೂಜೆ ಸಲ್ಲಿಸಿದರು. ಇದಾದ ನಂತರ ಓರ್ವ ಮಹಿಳೆಯೂ ಸೇರಿದಂತೆ ಪೌರ ಕಾರ್ಮಿಕರ ಪಾದವನ್ನು ಪ್ರಧಾನಿ ತೊಳೆದರು. ತನ್ನ ಪಾದವನ್ನು ತೊಳೆದ ಬಗ್ಗೆ ಮಹಿಳೆ ಪ್ರತಿಕ್ರಿಯಿಸಿ, ಇದು […]