ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನ: ನದಿಗೆ ಹಾರಿ ಸಾವು
ಮಂಗಳೂರು: ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಹಲ್ಲೆ ಆರೋಪಿ ನದಿಗೆ ಜಿಗಿದು ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪತ್ನಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದ ವ್ಯಕ್ತಿಯೊಬ್ಬ ಪೊಲೀಸರು ವಶಕ್ಕೆ ಪಡೆದು ಕರೆತರುತ್ತಿದ್ದಾಗ ತಪ್ಪಿಸಿಕೊಳ್ಳುವ ಯತ್ನದಲ್ಲಿ ಭಾನುವಾರ ರಾತ್ರಿ ಕೂಳೂರು ಸೇತುವೆಯಿಂದ ಫಲ್ಗುಣಿ ನದಿಗೆ ಜಿಗಿದಿದ್ದು, ಮುಳುಗಿ ಮೃತಪಟ್ಟಿದ್ದಾನೆ. ಕುದ್ರೋಳಿ ನಿವಾಸಿ ಮುನೀರ್, ಮೃತ ವ್ಯಕ್ತಿ. ಕೂಳೂರು ಸೇತುವೆಯಿಂದ ಜಿಗಿದಿದ್ದ ಆರೋಪಿಯ ಮೃತದೇಹ ಬೆಂಗರೆ ಸಮೀಪ ನಿನ್ನೆ ಪತ್ತೆಯಾಗಿದೆ. ಮುನೀರ್ ಭಾನುವಾರ ಸಂಜೆ ತನ್ನ ಪತ್ನಿಗೆ ಹಲ್ಲೆ […]