ಮಂಗಳೂರು: ಜ. 14-15 ರಂದು ಬಿಕರ್ನಕಟ್ಟೆ ಬಾಲ ಯೇಸುವಿನ ವಾರ್ಷಿಕ ಮಹೋತ್ಸವ
ಮಂಗಳೂರು : ಬಾಲ ಯೇಸುವಿನ ಪುಣ್ಯಕ್ಷೇತ್ರ ಕಾರ್ಮೆಲ್ ಹಿಲ್ ಬಿಕರ್ನಕಟ್ಟೆ ಇಲ್ಲಿಯ ವಾರ್ಷಿಕ ಮಹೋತ್ಸವವನ್ನು ಜನವರಿ 14 ಹಾಗೂ 15 ರಂದು ಅದ್ದೂರಿಯಿಂದ ಆಚರಿಸಲಾಗುವುದು ಎಂದು ಗುರುಕುಲ ಮುಖ್ಯಸ್ಥ ವಂದನೀಯ ಮೆಲ್ವಿನ್ ಡಿ ಕುನ್ಹಾ ತಿಳಿಸಿದರು. ಅವರು ನಗರದ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ವಾರ್ಷಿಕ ಮಹೋತ್ಸವ ಸಂಭ್ರಮದ ಬಲಿ ಪೂಜೆಗಳು ಜನವರಿ 14ರಂದು ಸಂಜೆ 6 ಘಂಟೆಗೆ ಮಹೋತ್ಸವ ಸಂಭ್ರಮದ ಬಲಿ ಪೂಜೆಯನ್ನು ಜೈಪುರ ಧರ್ಮ ಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷ ಅತೀ ವಂದನೀಯ […]