ಕುದುರೆಮುಖ: ಬೆಂಕಿ ಹೊತ್ತಿಕೊಂಡು ಸುಟ್ಟುಕರಕಲಾದ ಉಡುಪಿಯ ಟೂರಿಸ್ಟ್ ವಾಹನ

ಉಡುಪಿ: ಟೂರಿಸ್ಟ್ ವಾಹನ‌ವೊಂದು (ಟಿಟಿ) ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ಘಟನೆ‌ ಪಶ್ಚಿಮ ಘಟ್ಟದ ಕುದುರೆಮುಖದಲ್ಲಿ ಶನಿವಾರ ಸಂಭವಿಸಿದೆ‌. ಉಡುಪಿಯ ಟೂರಿಸ್ಟ್ ವಾಹನದಲ್ಲಿ ಕಾರ್ಕಳ ಮಾಳ ಮಾರ್ಗವಾಗಿ ಕುದುರೆಮುಖದ ಮೂಲಕ ಕಳಸದ ಕಡೆಗೆ ಹನ್ನೊಂದು ಮಂದಿ ಪ್ರಯಾಣಿಸುತ್ತಿದ್ದರು. ಕುದುರೆಮುಖ ಸಮೀಪಿಸುತ್ತಿದ್ದಂತೆ ಟೂರಿಸ್ಟ್ ವಾಹನದಲ್ಲಿ ಏಕಾಏಕಿ ಬೆಂಕಿ, ಹೊಗೆ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಬೆಂಕಿ ವಾಹನ ತುಂಬಾ ವ್ಯಾಪಿಸಿದೆ‌. ಅದೃಷ್ಟವಶಾತ್ ಚಾಲಕ ಸಹಿತ ವಾಹನದೊಳಗಿದ್ದವರು ಆತಂಕದಿಂದ ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಅಗ್ನಿಯ ಕೆನ್ನಾಲಗೆ […]