ಉಡುಪಿ: ಗಮನ ಸೆಳೆದ ರೋಮಾಂಚಕ ಕೆಟಿಎಂ ಬೈಕ್ ಸಾಹಸ

ಉಡುಪಿ: ಮುಂಚೂಣಿಯ ರೇಸಿಂಗ್ ಬೈಕುಗಳ ಬ್ರಾಂಡ್ ಕೆಟಿಎಂ ನಗರದಲ್ಲಿ ಶನಿವಾರ ರೋಮಾಂಚಕ ಬೈಕ್ ಸಾಹಸ ಪ್ರದರ್ಶನವನ್ನು ಆಯೋಜಿಸಿತ್ತು. ವೃತ್ತಿಪರ ಸಾಹಸಿ ಬೈಕ್ ಚಾಲಕರು ಮೈನವಿರೇಳಿಸುವಂತೆ ಬೈಕ್ ಸಾಹಸ ಮತ್ತು ಟ್ರಿಕ್‌ಗಳನ್ನು ಪ್ರದರ್ಶಿಸಿದರು. ನಗರದ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದ ಆವರಣದಲ್ಲಿ ನಡೆದ ಈ ಸಾಹಸ ಪ್ರದರ್ಶನಕ್ಕೆ ನೂರಾರು ಜನರು ಸಾಕ್ಷಿಯಾದರು. ಪ್ರೇಕ್ಷಕರು ಉಸಿರು ಬಿಗಿಹಿಡಿಯುವಂತ ಕೆಟಿಎಂ ಡ್ಯೂಕ್ ಬೈಕ್‌ಗಳಲ್ಲಿ ಚಾಲಕರು ಸಾಹಸಗಳನ್ನು ಸಾದರಪಡಿಸಿದರು. ಕೆಟಿಎಂ ಬೈಕ್ ಸಾಹಸ ನೋಡಲು ಸಾರ್ವಜನಿಕರಿಗೆ ಉಚಿತ ಪ್ರವೇಶವಿತ್ತು. “ಕೆಟಿಎಂ ಬ್ರಾಂಡ್ ಅಧಿಕ […]