ಕೆ.ಎಸ್.ಆರ್.ಟಿ.ಸಿಯ ಹೊಸ ಮಾದರಿ ಬಸ್ ಗಳಿಗೆ ಬ್ರ್ಯಾಂಡ್ ನೇಮ್ ಮತ್ತು ಗ್ರಾಫಿಕ್ ನೀಡಿ ನಗದು ಬಹುಮಾನ ಗೆಲ್ಲಿ

ಬೆಂಗಳೂರು: ಕೆ.ಎಸ್.ಆರ್.ಟಿ.ಸಿ ಯು ತನ್ನ ಪ್ರಯಾಣಿಕರಿಗೆ ಅತ್ಯುನ್ನತ ಶ್ರೇಣಿಯ ಪ್ರವಾಸದ ಅನುಭವವನ್ನು ನೀಡಲು ನೂತನ ಶ್ರೇಣಿಯ ವಾಹನ ಸೇವೆಯನ್ನು ಪರಿಚಯಿಸುತ್ತಿದ್ದು, ಸಂಸ್ಥೆಯ ಬಿಎಸ್ ವಿಐ- 9600 ವೋಲ್ವೋ ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ ಮತ್ತು ಒಲೆಕ್ಟ್ರಾ ಎಲೆಕ್ಟ್ರಿಕ್ ಬಸ್ ಗಳಿಗೆ ಸಾರ್ವಜನಿಕರಿಂದ ಬ್ರ್ಯಾಂಡ್ ನೇಮ್, ಟ್ಯಾಗ್ ಲೈನ್ ಹಾಗೂ ಗ್ರಾಫಿಕ್ ವಿನ್ಯಾಸವನು ನಿರೀಕ್ಷಿಸುತ್ತಿದೆ. ಉತ್ತಮ ಟ್ಯಾಗ್ ಲೈನ್ ನೊಂದಿಗೆ ಬ್ರ್ಯಾಂಡ್ ಹೆಸರನ್ನು ಸೂಚಿಸಿದವರಿಗೆ ಪ್ರತಿ ಮಾದರಿ ಬಸ್ಸಿಗೆ 10,000 ರೂ ನಗದು ಬಹುಮಾನ ಹಾಗೂ ಉತ್ತಮ ಗ್ರಾಫಿಕ್ಸ್ […]

ಮಂಗಳೂರು ವಿಮಾನ ನಿಲ್ದಾಣಕ್ಕೆ ಕೆ.ಎಸ್.ಆರ್.ಟಿ.ಸಿ ವೋಲ್ವೋ ಬಸ್ ಸಂಚಾರ ಪ್ರಾರಂಭ

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್ ಸಂಚಾರ ಆರಂಭಿಸಲು ಜನರಿಂದ ಬೇಡಿಕೆ ಬರುತ್ತಿದ್ದರೂ ಕಾರಣಾಂತರಗಳಿಂದ ಇಲ್ಲಿಗೆ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಬಸ್ ಪುನರ್ ಸಂಚಾರಕ್ಕೆ ಮುಹೂರ್ತ ಕೂಡಿ ಬಂದಿದ್ದು, ಮಂಗಳೂರು ನಗರದ ಬಿಜೈ ಸರಕಾರಿ ಬಸ್ ನಿಲ್ದಾಣ ಮತ್ತು ಮಣಿಪಾಲದಿಂದ ಬಜ್ಪೆ ಕೆಂಜಾರಿನಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸರಕಾರಿ ವೋಲ್ವೊ ಬಸ್ ಸಂಚಾರ ಆರಂಭವಾಗಲಿದೆ. ಹಲವು ವರ್ಷಗಳಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಸರಕಾರಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆ ಇದ್ದರೂ ಕೂಡ […]

ಬನ್ನಂಜೆ ನಾರಾಯಣಗುರು ಕಾಂಪ್ಲೆಕ್ಸ್ ನಲ್ಲಿ ಅಕ್ಷಯ ಭೂಮಿ ಕಚೇರಿ ಉದ್ಘಾಟನೆ

ಬನ್ನಂಜೆ: ಬನ್ನಂಜೆ ನಾರಾಯಣಗುರು ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭವಾದ ಅಕ್ಷಯ ಭೂಮಿ ಕಚೇರಿಯನ್ನು ಆದಿತ್ಯವಾರದಂದು ಬನ್ನಂಜೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಆನಂದ ಕಿದಿಯೂರು ಉದ್ಘಾಟಿಸಿದರು. ಆ ಬಳಿಕ ಮಾತನಾಡಿದ ಅವರು, ಸೇವಾಭಾವನೆ ಮತ್ತು ನಗುನಗುತ್ತಾ ಕೆಲಸ ಮಾಡಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಕಚೇರಿಯು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿ ಅಭಿವೃದ್ದಿ ಹೊಂದಲಿ ಎಂದು ಹಾರೈಸಿದರು. ಕಚೇರಿಯ ಮಾಲಕರಾದ ಶ್ರೀಮತಿ ಅಕ್ಷಯ ಮತ್ತು ಉಮೇಶ್ ಕುಪ್ಪೆಟ್ಟು ಉಪಸ್ಥಿತರಿದ್ದರು. ಅಕ್ಷಯ ಭೂಮಿಯಲ್ಲಿ ಜನರ ದಿನನಿತ್ಯದ ಜೀವನಕ್ಕೆ ಬೇಕಾಗುವ ಎಲ್ಲ […]

ಕರಾರಸಾ ನಿಗಮದಿಂದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಉಚಿತ ಬಸ್ ಪಾಸ್

ಉಡುಪಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಕರ್ನಾಟಕ ರಾಜ್ಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮಾತ್ರ ಉಚಿತ ಬಸ್ಸು ಪಾಸುಗಳನ್ನು ಸರ್ಕಾರದ ಇಡಿಸಿಎಸ್ ಇಲಾಖೆಯ ಸೇವಾಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ವಿತರಣೆ ಮಾಡುತ್ತಿದೆ. ಕರ್ನಾಟಕ ರಾಜ್ಯ ನೋಂದಾಯಿತ ಕಾರ್ಮಿಕರು ಯಾವುದೇ ಜಿಲ್ಲೆಯಲ್ಲಿ ನೋಂದಣಿಯಾಗಿದ್ದರೂ ಸಹ ಅವರು ಇಚ್ಚಿಸುವ ಪಾಸಿನಲ್ಲಿ ನಮೂದಿಸಲಾಗುವ ಪ್ರಾರಂಭಿಕ ಸ್ಥಳದಿಂದ 07 ಹಂತಗಳವರೆಗೆ(ಗರಿಷ್ಟ 45 ಕಿ.ಮೀ) […]

ಪ್ರಧಾನಿ ಮೋದಿ ಮಂಗಳೂರು ಭೇಟಿ: ಕ.ರಾ.ರ.ಸಾ.ನಿಗಮದ ಬಸ್ ಕಾರ್ಯಾಚರಣೆಯಲ್ಲಿ ವ್ಯತ್ಯಯ

ಉಡುಪಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೆಪ್ಟಂಬರ್ 2 ರಂದು ಮಂಗಳೂರಿನಲ್ಲಿ ವಿವಿಧ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನಲೆ, ಸದರಿ ಕಾರ್ಯಕ್ರಮಕ್ಕೆ ವಿವಿಧ ಭಾಗಗಳಿಂದ ಫಲಾನುಭವಿಗಳನ್ನು ಕರೆತರಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಹೆಚ್ಚಿನ ಸಂಖ್ಯೆಯ ಬಸ್ಸುಗಳನ್ನು ನಿಯೋಜಿಸಲಾಗಿರುತ್ತದೆ. ಆದ್ದರಿಂದ ಸದರಿ ದಿನದಂದು ಮಂಗಳೂರು ವಿಭಾಗ ವ್ಯಾಪ್ತಿಯ ಮಂಗಳೂರು ತಾಲೂಕು, ಧರ್ಮಸ್ಥಳ, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಕಾಸರಗೋಡು, ಉಡುಪಿ, ಕಾರ್ಕಳ, ಬೈಂದೂರು, ಕುಂದಾಪುರ, ಭಟ್ಕಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆಯಾಗುತ್ತಿರುವ ನಿಗಮದ ಸಾರಿಗೆ ಬಸ್ ಗಳ […]