ಉಡುಪಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಹೃದಯಾಘಾತದಿಂದ ಮೃತ್ಯು
ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕರೋರ್ವರು ಕರ್ತವ್ಯದಲ್ಲಿದ್ದಾಗಲೇ ಬಸ್ ನಲ್ಲಿ ಹೃದಯಾಘಾತವಾಗಿ ಮೃತಪಟ್ಟ ಘಟನೆ ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್ ನ ಮಲಯಮಾರುತ ಬಳಿ ಶನಿವಾರ ಬೆಳಿಗ್ಗೆ ನಡೆದಿದೆ. ಮೃತರನ್ನು ಕೆಎಸ್‌ಆರ್‌ಟಿಸಿ ನಿರ್ವಾಹಕ ಸಖರಾಯಪಟ್ಟಣ ಬಳಿ ಕುನ್ನಾಳು ಗ್ರಾಮದ ನಿವಾಸಿ ವಿಜಯ ಕುಮಾರ್ (42) ಎಂದು ಗುರುತಿಸಲಾಗಿದೆ. ಬಸ್ ಚಿಕ್ಕಮಗಳೂರು ನಗರ ನಿಲ್ದಾಣದಿಂದ ಬೆಳಿಗ್ಗೆ 6 ಗಂಟೆಗೆ ಉಡುಪಿಗೆ ಬಸ್ ಹೊರಟಿತ್ತು. ಕೊಟ್ಟಿಗೆಹಾರ ಚಾರ್ಮಾಡಿ ಘಾಟ್ ನ ಮಲಯಮಾರುತ ಬಳಿ ಸಾಗುವಾಗ ನಿರ್ವಾಹಕ ವಿಜಯ ಕುಮಾರ್ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಚಾಲಕ ಮತ್ತು ಕೊಟ್ಟಿಗೆಹಾರ ನಿಲ್ದಾಣ […]