ಅಡಿಕೆಯಲ್ಲಿ ಸಿಂಗಾರ ಒಣಗುವ ರೋಗ ಮತ್ತು ಕಾಯಿ ಉದುರುವಿಕೆಯನ್ನು ನಿಯಂತ್ರಿಸುವ ಕ್ರಮಗಳು

ಉಡುಪಿ ಮೇ 12: ಅಡಿಕೆಯಲ್ಲಿ ಸಣ್ಣ ಕಾಯಿಗಳು ಉದುರುವುದು ಸಾಮಾನ್ಯವಾಗಿ ಕಾಣುತ್ತಿದ್ದು, ಇದಕ್ಕೆ ಹಲವಾರು ಕಾರಣಗಳನ್ನು ಗುರುತಿಸಲಾಗಿದೆ. 1) ಸರಿಯಾದ ಪ್ರಮಾಣದಲ್ಲಿ ಅಡಿಕೆ ಮರಗಳಿಗೆ ನೀರನ್ನು ಒದಗಿಸುವುದು: ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ ಮಾರ್ಚ, ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರತಿ ಗಿಡಕ್ಕೆ, 15ರಿಂದ 20 ಲೀಟರ್ ನೀರನ್ನು ಹನಿ ನೀರಾವರಿ ಮುಖಾಂತರ ನೀಡಬೇಕಾಗುತ್ತದೆ. ಬುಡದಲ್ಲಿ ತೇವಾಂಶ ಕಡಿಮೆಯಾದಾಗ ಹರಳುಗಳು ಉದುರುವುದು ಸಾಮಾನ್ಯ. 2) ಸಮಗ್ರ ಪೋಷಕಾಂಶ ಮತ್ತು ಹುಳಿ ಮಣ್ಣು ನಿರ್ವಹಣೆ: ಮಣ್ಣಿನ ಪರೀಕ್ಷೆಯ ಅನುಗುಣವಾಗಿ ಶಿಫಾರಸ್ಸು […]