ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕ್ರತಿಕ  ಪ್ರತಿಷ್ಠಾನದ 5ನೇ ವರ್ಷದ  ವಾರ್ಷಿಕೋತ್ಸವ ಕಾರ್ಯಕ್ರಮ

ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ಉಡುಪಿ: ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕ್ರತಿಕ  ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ ಉಚಿತ ತೆಂಕುತಿಟ್ಟು  ಯಕ್ಷಗಾನ ತರಗತಿಯು  ಶ್ರೀ ಸೋದೆ ಮಠದ ಯತಿಗಳ ಕೃಪಾಶೀರ್ವಾದದಿಂದ ಯಶಸ್ವಿಯಾಗಿ ಐದು  ಸಂವತ್ಸರಗಳನ್ನು ಪೂರೈಸಿದೆ. ಇದರ 5ನೇ ವರ್ಷದ  ವಾರ್ಷಿಕೋತ್ಸವವು ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ 30 ಏಪ್ರಿಲ್ 2022, ಶನಿವಾರದಂದು ಸಂಜೆ 7 ಗಂಟೆಗೆ ಜರುಗಲಿದೆ. ಈ ಪ್ರಯುಕ್ತ   ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಶ್ರೀ ಕೃಷ್ಣಾಪುರ  ಮಠದ ಶ್ರೀ […]

ಶ್ರೀಕೃಷ್ಣಮಠದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

ಉಡುಪಿ: ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ,ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ,ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ,ನೃತ್ಯ ವಿದುಷಿ ಮಂಜರಿಚಂದ್ರ ಪುಷ್ಪರಾಜ್ ಇವರ ಶಿಷ್ಯೆ ಕುಮಾರಿ ಎಸ್.ಅನಘಶ್ರೀ ಇವರಿಂದ ನೃತ್ಯಾಭಿವಂದನ ಅಂಗವಾಗಿ ಭರತನಾಟ್ಯ ಕಾರ್ಯಕ್ರಮ, ಭಜನಾ ಕಾರ್ಯಕ್ರಮ ಕಲಾವಿದರಾದ ಕೋಟ ಭಗವತ್ ಭಜನಾ ತಂಡದಿಂದ ಕೋಲಾಟ ನೃತ್ಯ ಮತ್ತು ಉದಯಾಸ್ತಮಾನ ಭಜನಾ ಕಾರ್ಯಕ್ರಮಗಳು ನಡೆದವು.

ಉಡುಪಿ ಕೃಷ್ಣ ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

  ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಉಡುಪಿಯ ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯ ಮತ್ತು ಬಳಗದವರಿಂದ “ಕರ್ನಾಟಕ ಶಾಸ್ತ್ರೀಯ ಸಂಗೀತ” ಕಾರ್ಯಕ್ರಮವು ಉಡುಪಿಯ ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ ನಡೆಯಿತು.