ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದ ನಿರ್ಮಲಾ ಬಿರ್ಲಾ

ಉಡುಪಿ: ಬಿರ್ಲಾ ಕಂಪನಿಯ ಮಾಲಕರಾದ ಸಿ.ಕೆ.ಬಿರ್ಲಾರವರ ತಾಯಿ ನಿರ್ಮಲಾ ಬಿರ್ಲಾರವರು ಶ್ರೀಕೃಷ್ಣಮಠಕ್ಕಾಗಮಿಸಿ ದೇವರ ದರ್ಶನ ಪಡೆದು, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು. ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಸ್ವಾಗತಿಸಿದರು. ಆಡಳಿತ ವರ್ಗದ ವಾದಿರಾಜ್ ಉಪಸ್ಥಿತರಿದ್ದರು.

ಉಡುಪಿ: ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ವತಿಯಿಂದ ಚಂಡಿಕಾಯಾಗ

ಉಡುಪಿ: ಇಲ್ಲಿನ ಕೃಷ್ಣ ಮಠದ ವಾಹನ ನಿಲುಗಡೆ ಪ್ರದೇಶದಲ್ಲಿ ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ಉಡುಪಿ ಇದರ 7ನೇ ವರ್ಷದ ಶಾರದಾ ಮಾತೆ ಸನ್ನಿಧಿಯಲ್ಲಿ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ಮಾರ್ಗದರ್ಶನದಲ್ಲಿ ಮಂಗಳವಾರದಂದು ಅರ್ಚಕ ವೃಂದದವರು ಚಂಡಿಕಾಯಾಗ ನಡೆಸಿಕೊಟ್ಟರು. ಸಾಮೂಹಿಕ ಪ್ರಾಥನೆ, ಚಂಡಿಕಾ ಯಾಗದ ಪೂರ್ಣಾಹುತಿ, ಮಹಾ ಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಮಾರಂಭದಲ್ಲಿ ಲಕ್ಷ್ಮೀ ನಾರಾಯಣ ಮಟ್ಟು, ರಾಧಾಕೃಷ್ಣ ಮೆಂಡನ್, ತಾರಾ ಆಚಾರ್ಯ, ಸರೋಜಾ ರಾವ್, ಹರೀಶ್, ಸುರೇಶ್ ಶೇರಿಗಾರ್, ಸುಜಾತ, ಸತೀಶ್ ಕುಮಾರ್, ಮಹೇಶ್ […]

ದುರ್ಗಾ ದೌಡ್ ಗೆ ಸಜ್ಜಾದ ಕೃಷ್ಣ ನಗರಿ: 50 ಸಾವಿರ ಮಿಕ್ಕಿ ಹಿಂದೂ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ

ಉಡುಪಿ: ಹಿಂ.ಜಾ.ವೇ ವತಿಯಿಂದ ಅ.5 ರಂದು ಉಡುಪಿಯಲ್ಲಿ ನಡೆಯಲಿರುವ ದುರ್ಗಾ ದೌಡ್ ಕಾರ್ಯಕ್ರಮಕ್ಕೆ ಭರದ ಸಿದ್ದತೆಗಳು ಜರುಗುತ್ತಿವೆ. ಭೋಪಾಲದ ಸಂಸದೆ, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮಧ್ಯಾಹ್ನ 2 ಗಂಟೆಗೆ ದಿಕ್ಸೂಚಿ ಭಾಷಣ ನೆರವೇರಿಸಲಿದ್ದಾರೆ. ಕಡಿಯಾಳಿ ಮಹಿಷ ಮರ್ದಿನಿ ದೇವಸ್ಥಾನದಿಂದ ಉಡುಪಿ ಕೃಷ್ಣ ಮಠದವರೆಗೆ ಮೆರವಣಿಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ದೂರದ ಊರುಗಳಿಂದ ದುರ್ಗಾ ದೌಡ್ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಕಾರ್ಕಳ, ಕುಂದಾಪುರ, ದ.ಕ ಮುಂತಾದೆಡೆಗಳಿಂದ […]

ಮೋಹಿನಿ ರೂಪದಲ್ಲಿ ಕಂಗೊಳಿಸಿದ ಪೊಡವಿಗೊಡೆಯ ಶ್ರೀಕೃಷ್ಣ ಪರಮಾತ್ಮ

ಉಡುಪಿ: ನವರಾತ್ರಿಯ ಪ್ರಯುಕ್ತ ಶ್ರೀಕೃಷ್ಣದೇವರಿಗೆ ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ‘ಮೋಹಿನಿ’ ವಿಶೇಷ ಅಲಂಕಾರ ಮಾಡಿದರು. ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.

ಶ್ರೀಕೃಷ್ಣಜನ್ಮಾಷ್ಟಮಿ ಸ್ಪರ್ಧಾ ಫಲಿತಾಂಶ

ಉಡುಪಿ: ಶ್ರೀಕೃಷ್ಣಜನ್ಮಾಷ್ಟಮಿ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ಫಲಿತಾಂಶಗಳು ಇಂತಿವೆ: ಮುದ್ದು ಕೃಷ್ಣ ಸ್ಪರ್ಧೆ: 0-1 ವಿಭಾಗ ಪ್ರಥಮ- ಪ್ರನೂಷ್ ಆಚಾರ್ಯ ದ್ವಿತೀಯ- ಮೈಥಿಲಿ ರಾವ್, ಸಿಯಾ ರಾವ್, ವಿಧಾತ್ರಿ ಭಟ್ ತೃತೀಯ: ಇಂಚರಾ ಭಟ್ 1-3 ವಿಭಾಗ ಪ್ರಥಮ: ಶೌರಿ ಪ್ರಶಾಂತ್ ದ್ವಿತೀಯ- ಶ್ರೀನಿವಾಸ್ ಶಣೈ ತೃತೀಯ: ಸದ್ಗುಣಿ, ಅವನಿ ಕೆದಿಲಾಯ, ಮೇಧಾ ಬಾಲಕೃಷ್ಣ ವಿಭಾಗ (3-6) ಪ್ರಥಮ-ಚರಣ್ಯ ದ್ವಿತೀಯ: ಶಿವಣ್ಯ ಪೂಜಾರಿ ತೃತೀಯ: ತ್ರಿಶಾ ಕಿಶೋರ ಕೃಷ್ಣ ವಿಭಾಗ (6-10) ಪ್ರಥಮ-ಪ್ರತ್ಯೂಷ ನಾಯಕ್ ದ್ವಿತೀಯ: […]