ನವೀಕೃತ ಶ್ರೀ ಕೃಷ್ಣ ಛತ್ರ ಲೋಕಾರ್ಪಣೆ

ಉಡುಪಿ: ಪರ್ಯಾಯ ಶ್ರೀ‌ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ತಮ್ಮ ಚತುರ್ಥ ಶ್ರೀ ಕೃಷ್ಣ ಪೂಜಾ ಪರ್ಯಾಯ ಅವಧಿಯಲ್ಲಿ ಕೆನರಾ ಬ್ಯಾಂಕ್ ಮತ್ತು ಭಕ್ತರ ನೆರವಿನೊಂದಿಗೆ ಶ್ರೀ ಕೃಷ್ಣಮಠದ ರಾಜಾಂಗಣಕ್ಕೆ ಹೊಂದಿಕೊಂಡು ಇರುವ ನವೀಕೃತ ಶ್ರೀ ಕೃಷ್ಣ ಛತ್ರವನ್ನು ಇತರೆ ಮಠಾಧೀಶರ ಉಪಸ್ಥಿತಿಯಲ್ಲಿ ಬುಧವಾರ ಶ್ರೀ ಕೃಷ್ಣನಿಗೆ ಸಮರ್ಪಿಸಿದರು. ಬಳಿಕ ಮಠದ ಪುರೋಹಿತ ಶ್ರೀನಿವಾಸ ಉಪಾಧ್ಯಾಯರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ನೆರವೇರಿದವು. ಸದ್ರಿ ಛತ್ರವು 1966 ರಲ್ಲಿ ಆಗಿನ ಶೀರೂರು ಮಠಾಧೀಶರಿಂದ ನಿರ್ಮಸಲ್ಪಟ್ಟು ಪ್ರಸ್ತುತ ಶಿಥಿಲಗೊಂಡಿತ್ತು. ಇದೀಗ […]

ಉಸ್ತುವಾರಿ ಸಚಿವರಿಂದ ಶ್ರೀಕೃಷ್ಣ ಮಠ ಭೇಟಿ

ಉಡುಪಿ: ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮಿ ಆರ್.ಹೆಬ್ಬಾಳ್ಕರ್ ಅವರು ಶ್ರೀಕೃಷ್ಣಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನರಾದ ವರದರಾಜ ಭಟ್,ಸ್ವಾಗತ ಸಮಿತಿ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್,ಕಾಂಗ್ರೆಸ್ ಪಕ್ಷದ ಮುಖಂಡರಾದ ಕೃಷ್ಣಮೂರ್ತಿ ಭಟ್,ಉದಯಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸಿಜೆಐ ಟಿ.ಎಸ್.ನರಸಿಂಹ ಅವರಿಂದ ಶ್ರೀಕೃಷ್ಣಮಠಕ್ಕೆ ಭೇಟಿ

ಉಡುಪಿ: ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಟಿ.ಎಸ್.ನರಸಿಂಹ ತಮ್ಮ ಕುಟುಂಬ ಸಮೇತರಾಗಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣದೇವರ ದರ್ಶನ ಪಡೆದರು.ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಇವರು ಉಪಸ್ಥಿತರಿದ್ದರು.

ಪರ್ಯಾಯ ಅಕ್ಕಿ ಮುಹೂರ್ತ ಪೂರ್ವ ಭಾವಿ ಚಿಂತನಾ ಸಭೆ

ಮುಂಬರುವ ಉಡುಪಿಯ ಶ್ರೀಕೃಷ್ಣಪೂಜಾ ಪರ್ಯಾಯವನ್ನು ನೆರವೇರಿಸಲಿರುವ ಭಾವಿ ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥರ ಆದೇಶದಂತೆ ಮೇ 17 ರಂದು ಪುತ್ತಿಗೆ ಮಠದಲ್ಲಿ ಪೂರ್ವಭಾವಿ ಚಿಂತನಾ ಸಭೆಯು ಸ್ಥಳೀಯ ವಿವಿಧ ಸಂಘದ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹವ್ಯಕ ಸಭಾ, ಬಿಲ್ಲವ ಸಮಾಜ, ಮೊಗವೀರ ಸಮಾಜ, ವಿಶ್ವಕರ್ಮ ಸಮಾಜ, ಕುಲಾಲ ಸಂಘ ಜೋಗಿ ಸಮಾಜ, ತುಳು ಕೂಟ ,ಜಿ.ಎಸ್.ಬಿ ಸಮಾಜಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.