ಪುತ್ತಿಗೆ ಶ್ರೀಗಳನ್ನು ಭೇಟಿ ಮಾಡಿದ ಇಸ್ರೋ ಸಹ ನಿರ್ದೇಶಕ ಡಾ. ಎಸ್.ವಿ. ಶರ್ಮಾ
ಉಡುಪಿ: ದೇಶದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಯಾದ ಬೆಂಗಳೂರಿನ ಇಸ್ರೋ ಸಂಸ್ಥೆಯ ಸಹ ನಿರ್ದೇಶಕ ಡಾ. ಎಸ್.ವಿ. ಶರ್ಮಾ ಪುತ್ತಿಗೆ ಶ್ರೀಪಾದರನ್ನು ಭೇಟಿ ಮಾಡಿ ಇಸ್ರೋ (ISRO) ಸಂಸ್ಥೆಯ ಸ್ಮರಣಿಕೆಯನ್ನು ನೀಡಿದರು. ಈ ಸಂದರ್ಭದಲ್ಲಿ ಶ್ರೀಪಾದರು ಶ್ರೀಕೃಷ್ಣನ ಪ್ರಸಾದವನ್ನು ನೀಡಿ ಅವರನ್ನು ಆಶೀರ್ವದಿಸಿದರು.
ಶ್ರೀ ಕೃಷ್ಣ ಮಠಕ್ಕೆ ಇಂಧನ ಸಚಿವರ ಭೇಟಿ
ಉಡುಪಿ: ಶ್ರೀ ಕೃಷ್ಣ ಮಠಕ್ಕೆ ಇಂಧನ ಸಚಿವರಾದ ಕೆ. ಜೆ.ಜಾರ್ಜ್ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು. ನಂತರ ಗೀತಾಮಂದಿರದಲ್ಲಿ ಪರ್ಯಾಯ ಶ್ರೀಪಾದರ ಭೇಟಿ ಮಾಡಿ ಅವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀಪಾದರು ವಿಶ್ವ ಗೀತಾ ಪರ್ಯಾಯ ಬಗ್ಗೆ ತಿಳಿಸಿ ಭಗವದ್ಗೀತೆಯ ವ್ಯಾಪಕ ಪ್ರಚಾರದ ಬಗ್ಗೆ ಮಾಹಿತಿ ನೀಡಿ ಸಚಿವರಿಗೆ ಭಗವದ್ಗೀತೆಯ ಪುಸ್ತಕವನ್ನು ನೀಡಿ ಹರಸಿದರು.
ಉದ್ಯಮಿ ನಂದ್ಯಾಲ ರಘುವೀರ್ ಶೆಣೈ ಉಡುಪಿ ಭೇಟಿ
ಉಡುಪಿ: ಉದ್ಯಮಿ ನಂದ್ಯಾಲ ರಘುವೀರ್ ಶೆಣೈ ಅವರು ಆಂಧ್ರ ಪ್ರದೇಶದ ಹೋಟೆಲ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ನಂತರ ಪ್ರಥಮ ಬಾರಿ ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಗಳು ಅವರನ್ನು ಗೌರವಿಸಿ ಆಶೀರ್ವದಿಸಿದರು ಪರ್ಯಾಯದ ಆಹ್ವಾನ ಪತ್ರಿಕೆ ನೀಡಿದರು. ಈ ಕಾರ್ಯಕ್ರಮದಲ್ಲಿ ನಿವೃತ್ತ ಆದಾಯ ಶಾಖಾ ಅಧಿಕಾರಿ ಆನಂದ ಶೆಟ್ಟಿ, ಉದ್ಯಮಿ ಪ್ರಶಾಂತ್ ಕಾಮತ್ ಕುಕ್ಕಿಕಟ್ಟೆ ಉಪಸ್ಥಿತರಿದ್ದರು.