ಸೆಪ್ಟೆಂಬರ್- ಅಕ್ಟೋಬರ್‌ನಲ್ಲಿ ಕೋವಿಡ್ ಮೂರನೇ ಅಲೆ: ತಜ್ಞರ ಎಚ್ಚರಿಕೆ
ನವದೆಹಲಿ: ಕೋವಿಡ್ ಎರಡನೇ ಅಲೆಯ ಪ್ರಭಾವ ಕಡಿಮೆ ಆಯ್ತು ಎನ್ನುವ ಬೆನ್ನಲ್ಲೇ ಇದೀಗ ಕೋವಿಡ್ ಮೂರನೇ ಅಲೆಯ ಆತಂಕ ದೇಶದ ಜನರನ್ನು ಕಾಡುತ್ತಿದೆ. ಹೌದು, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಮಧ್ಯದ ಯಾವುದೇ ಸಮಯದಲ್ಲಿ ಕೋವಿಡ್–19 ಮೂರನೇ ಅಲೆ ದೇಶದಲ್ಲಿ ಆರಂಭವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ರಾಷ್ಟ್ರೀಯ ವಿಪತ್ತು ನಿರ್ವಹಣೆ ಸಂಸ್ಥೆಯು (ಎನ್‌ಐಡಿಎಂ) ರಚಿಸಿದ್ದ ತಜ್ಞರ ಸಮಿತಿಯು ಈ ಬಗ್ಗೆ ವರದಿ ನೀಡಿದೆ. ಮೂರನೇ ಅಲೆಯಲ್ಲಿ ವಯಸ್ಕರ ರೀತಿಯಲ್ಲೇ ಮಕ್ಕಳು […]