ಕೇಂದ್ರದಿಂದ ಕೋವಿಡ್ ರೋಗಿಗಳ ಸ್ವಯಂ ಆರೈಕೆ ವಿಧಾನ ಮಾರ್ಗಸೂಚಿ ಬಿಡುಗಡೆ: ವಿವರ ಹೀಗಿದೆ.?

ನವದೆಹಲಿ: ಕೋವಿಡ್ ರೋಗಿಗಳು ಆಸ್ಪತ್ರೆಗಳಿಗೆ ದಾಖಲಾಗುವ ಅನಿವಾರ್ಯತೆಯನ್ನು ಸಾಧ್ಯವಾದಷ್ಟೂ ತಡೆಯುವುದಕ್ಕಾಗಿ ಕೇಂದ್ರ ಸರ್ಕಾರವು ಆರಂಭಿಕ ಹಂತದ ಕೋವಿಡ್-19  ಸೋಂಕು ಇರುವ ರೋಗಿಗಳಿಗೆ ಚಿಕಿತ್ಸೆ, ಸ್ವಯಂ ಆರೈಕೆ ವಿಧಾನ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸ್ವಯಂ ಆರೈಕೆಗಾಗಿ ಪ್ರೋನಿಂಗ್ ವಿಧಾನವನ್ನು ಅನುಸರಿಸಲು ಸಲಹೆ ನೀಡಿದ್ದು, ಐಸೊಲೇಷನ್ ನಲ್ಲಿರುವ ರೋಗಿಗಳು ಈ ವಿಧಾನವನ್ನು ಅನುಸರಿಸಬಹುದೆಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಪ್ರೋನಿಂಗ್ ವಿಧಾನ ಅನುಸರಿಸುವುದು ಹೇಗೆ? ಪ್ರೋನಿಂಗ್ ಚಿಕಿತ್ಸಾ ವಿಧಾನದಲ್ಲಿ ರೋಗಿಗಳನ್ನು, ಮೇಲ್ಕಂಡ ಚಿತ್ರದಲ್ಲಿ ತೋರಿಸಿರುವಂತೆ ಹೊಟ್ಟೆ ಕೆಳಭಾಗಕ್ಕೆ ಬರುವ ಭಂಗಿಯಲ್ಲಿ ಮಲಗಿಸಲಾಗುತ್ತದೆ. […]