ಕೋಟೇಶ್ವರ: ಎಲ್ಲೆಲ್ಲೂ ಜನದಟ್ಟಣೆ, ವಾಹನ ತಪಾಸಣೆ: ಬೈಕ್ ವಶ:
ಕುಂದಾಪುರ: ಅತೀಹೆಚ್ಚು ಹೋಲ್‌ಸೇಲ್ ಅಂಗಡಿಗಳನ್ನು ಹೊಂದಿರುವ ಇಲ್ಲಿನ ಕೋಟೇಶ್ವರ ಪೇಟೆಯಲ್ಲಿ ಶನಿವಾರ ಬೆಳಿಗ್ಗೆ ದಿನಸಿ ಖರೀದಿಗಾಗಿ ಸಾರ್ವಜನಿಕರು ಮುಗಿಬಿದ್ದ ದೃಶ್ಯ ಕಂಡುಬಂದಿತು. ಯಾವುದೇ ದಿನಸಿ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಾರ್ವಜನಿಕರೆಲ್ಲರೂ ದಿನಸಿ ಖರೀದಿಗೆ ಗುಂಪುಗುಂಪಾಗಿ ಜಮಾಯಿಸಿದ್ದು, ಪೊಲೀಸರ ಆಗಮನದ ಬಳಿಕ ಪರಿಸ್ಥಿತಿ ಹತೋಟಿಗೆ ಬಂತು.ಸಾಮಾಜಿ ಅಂತರ ಕಾಯ್ದುಕೊಳ್ಳಲು ಅವಕಾಶ ಮಾಡಿಕೊಡದ ಅಂಗಡಿ ಮಾಲೀಕರಿಗೆ ಪಿಎಸ್‌ಐ ಹರೀಶ್ ಆರ್ ನಾಯ್ಕ್ ಖಡಕ್ ಎಚ್ಚರಿಕೆ ನೀಡಿದರು. ಸಾಕಷ್ಟು ಜನದಟ್ಟಣೆಯಿಂದ ಕೂಡಿದ ಕೋಟೇಶ್ವರ ಪೇಟೆ ೧೧ ಗಂಟೆಯ ಬಳಿಕ ಖಾಲಿ-ಖಾಲಿಯಾಯಿತು. […]