ಕೋಟೇಶ್ವರ ಕೋಟಿಲಿಂಗೇಶ್ವರ ದೇವಳದ ಮನ್ಮಹಾರಥೋತ್ಸವ ಸಡಗರದಿಂದ ಸಂಪನ್ನ
ಕೋಟೇಶ್ವರ: ಅವಿಭಜಿತ ದ.ಕ ಜಿಲ್ಲೆಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವವು ಸೋಮವಾರದಂದು ಸಂಪನ್ನಗೊಂಡಿತು, ಪ್ರಾತಃಕಾಲ ದೇವಳದ ತಂತ್ರಿಗಳು ರಥಾರೋಹಣ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವರಿಗೆ ಶತರುದ್ರಾಭಿಷೇಕ ಹಾಗೂ ಇತರ ಧಾರ್ಮಿಕ ಪೂಜೆಗಳು ನಡೆದ ಬಳಿಕ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಜಯಘೋಷ ಹಾಕಿದರು. ಸಂಜೆ ಬಸವನಗುಡಿ ಸನ್ನಿಧಾನದಿಂದ ದೇವರಿಗೆ ಅಭಿಮುಖವಾಗಿ ರಥ ಎಳೆದ ಬಳಿಕ ರಥಾವರೋಹಣ ವಿಧಿ ಸಮಾಪನಗೊಂಡಿತು. ದೇವಳದ ರಥೋತ್ಸವದ ಸಂದರ್ಭ ಪಾರಂಪರಿಕವಾಗಿ ಗರುಡ […]