‘ಕೋಟ ಶ್ರೀನಿವಾಸ ಪೂಜಾರಿ ಗೆ‌ ಜಿಲ್ಲಾ ಉಸ್ತುವಾರಿ ತಪ್ಪಿಸಲು ಐವರು ಶಾಸಕರ ಒತ್ತಡವೇ ಕಾರಣ..!

ಉಡುಪಿ: ಬಿಲ್ಲವ ಮುಖಂಡ ಹಾಗೂ ಸಾಕಷ್ಟು ಅನುಭವ ಹೊಂದಿರುವ ಸಜ್ಜನ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿಗೆ ಉಡುಪಿ ಜಿಲ್ಲೆಯ ಉಸ್ತುವಾರಿಯನ್ನು ತಪ್ಪಿಸಿ, ದ.ಕ. ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಲು ಜಿಲ್ಲೆಯ ಐವರು ಶಾಸಕರ ಒತ್ತಡವೇ ಕಾರಣ ಎಂಬ ಗುಮಾನಿ ಇದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಗೌರವಾಧ್ಯಕ್ಷ ಅಚ್ಯುತ ಕಲ್ಮಾಡಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದಾರೆ. ಉಸ್ತುವಾರಿ ಸಚಿವ ಸ್ಥಾನ ತಪ್ಪಿಸಲು ಒತ್ತಡ ಹಾಕಿರುವ ಶಾಸಕರ ಮನೆಗೆ ತೆರಳಿ ಮನವಿ ಮಾಡುವ ಕೆಲಸ ಮಾಡಲಾಗುವುದು. […]