ಕೋಟ: ಪ್ರೀತಿ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಮನೆಬಿಟ್ಟು ಹೋದ ಯುವತಿ ನಾಪತ್ತೆ

ಕೋಟ: ಪ್ರೀತಿಯ ವಿಚಾರಕ್ಕೆ ಸಂಬಂಧಿಸಿ ಮನೆಯಲ್ಲಿ ಗಲಾಟೆ ಮಾಡಿಕೊಂಡು ಹೊರಗೆ ಹೋದ ಯುವತಿಯೊಬ್ಬಳು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಕುಂದಾಪುರ ತಾಲೂಕಿನ ಉಳ್ಚೂರು ಗ್ರಾಮದ ಕಳ್ಳಿಗುಡ್ಡೆಯಲ್ಲಿ ನಡೆದಿದೆ. ಉಳ್ಚೂರು ಗ್ರಾಮದ ಕಳ್ಳಿಗುಡ್ಡೆಯ ನಿವಾಸಿ ವಸಂತ ಅವರ ಮಗಳು 19ವರ್ಷದ ಚಂದನಾ ನಾಪತ್ತೆಯಾದ ಯುವತಿ. ಈಕೆ ಜ.11ರಂದು ರಾತ್ರಿ ಮನೆಯಲ್ಲಿ ಪೋನಿನಲ್ಲಿ ಮಾತನಾಡುತ್ತಿದ್ದಳು. ಇದನ್ನು ತಂದೆ ಪ್ರಶ್ನಿಸಿದ್ದಾರೆ. ಇದೇ ವಿಚಾರಕ್ಕೆ ಮನೆಯಲ್ಲಿ ಗಲಾಟೆ ನಡೆದು, ಚಂದನಾ ಮನೆ ಬಿಟ್ಟು ಹೋಗಿದ್ದಾಳೆ. ಮಗಳು ವಾಪಾಸು ಬರಬಹುದು ಎಂದು ತಂದೆ […]