ಕೋಟ: ಪ್ರೀತಿ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಮನೆಬಿಟ್ಟು ಹೋದ ಯುವತಿ ನಾಪತ್ತೆ

ಕೋಟ: ಪ್ರೀತಿಯ ವಿಚಾರಕ್ಕೆ ಸಂಬಂಧಿಸಿ ಮನೆಯಲ್ಲಿ ಗಲಾಟೆ ಮಾಡಿಕೊಂಡು ಹೊರಗೆ ಹೋದ ಯುವತಿಯೊಬ್ಬಳು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಕುಂದಾಪುರ ತಾಲೂಕಿನ ಉಳ್ಚೂರು ಗ್ರಾಮದ ಕಳ್ಳಿಗುಡ್ಡೆಯಲ್ಲಿ ನಡೆದಿದೆ.

ಉಳ್ಚೂರು ಗ್ರಾಮದ ಕಳ್ಳಿಗುಡ್ಡೆಯ ನಿವಾಸಿ ವಸಂತ ಅವರ ಮಗಳು 19ವರ್ಷದ ಚಂದನಾ ನಾಪತ್ತೆಯಾದ ಯುವತಿ. ಈಕೆ ಜ.11ರಂದು ರಾತ್ರಿ ಮನೆಯಲ್ಲಿ ಪೋನಿನಲ್ಲಿ ಮಾತನಾಡುತ್ತಿದ್ದಳು. ಇದನ್ನು ತಂದೆ ಪ್ರಶ್ನಿಸಿದ್ದಾರೆ. ಇದೇ ವಿಚಾರಕ್ಕೆ ಮನೆಯಲ್ಲಿ ಗಲಾಟೆ ನಡೆದು, ಚಂದನಾ ಮನೆ ಬಿಟ್ಟು ಹೋಗಿದ್ದಾಳೆ. ಮಗಳು ವಾಪಾಸು ಬರಬಹುದು ಎಂದು ತಂದೆ ಸುಮ್ಮನಿದ್ದು, ಬಳಿಕ ಎಲ್ಲ ಕಡೆ ಹುಡುಕಾಟ ನಡೆಸಿದ್ದಾರೆ. ಆದರೆ ಈವರೆಗೂ ಚಂದನಾ ಪತ್ತೆಯಾಗಿಲ್ಲ. ಈ ಬಗ್ಗೆ ತಂದೆ ವಸಂತ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಯುವತಿಯ ಚಹರೆ: 5 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ ಹಾಗೂ ಕನ್ನಡ ಭಾಷೆ ಮಾತನಾಡುತ್ತಾಳೆ‌ . ಈಕೆಯ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ಕೋಟ ಪೊಲೀಸ್ ಠಾಣೆ ದೂರವಾಣಿ ಸಂಖದಯೆ : 0820- 2564 155, ಹಾಗೂ ಮೊಬೈಲ್ ಸಂಖ್ಯೆ: 94808 05454 ಸಂಪರ್ಕಿಸುವಂತೆ ಕೋರಲಾಗಿದೆ .