ದೇವರ ಕೋಲು ಮುಟ್ಟಿದ್ದಕ್ಕೆ ಹಲ್ಲೆಗೊಳಗಾದ ದಲಿತ ಬಾಲಕನ ಮನೆಗೆ ಸಮಾಜ ಕಲ್ಯಾಣ ಸಚಿವರ ಭೇಟಿ: ಪರಿಹಾರ ಘೋಷಣೆ

ಕೋಲಾರ: ದೇವರ ಉತ್ಸವದಲ್ಲಿ 14 ವರ್ಷದ ದಲಿತ ಬಾಲಕನೊಬ್ಬ ಉತ್ಸವ ಮೂರ್ತಿಯನ್ನು ಮುಟ್ಟಿದ ಎಂಬ ಕಾರಣಕ್ಕೆ ಆತನನ್ನು ಥಳಿಸಿ, ಆತನ ಕುಟುಂಬಕ್ಕೆ 60 ಸಾವಿರ ರೂಗಳ ದಂಡ ವಿಧಿಸಿರುವ ಘಟನೆ ಕೋಲಾರ ತಾಲೂಕಿನ ಟೇಕಲ್ ಬಳಿಯ ಉಳ್ಳೇರ ಹಳ್ಳಿಯಲ್ಲಿ ನಡೆದಿತ್ತು. ಭೂತಮ್ಮನ ಮೂರ್ತಿ ಉತ್ಸವದ ವೇಳೆ ಕೆಳಕ್ಕೆ ಬಿದ್ದ ದೇವರನ್ನು ಹೊರುವ ಗುಜ್ಜ ಕೋಲನ್ನು ದಲಿತ ಬಾಲಕನೊಬ್ಬ ಎತ್ತಿಕೊಟ್ಟಿದ್ದಕ್ಕೆ ಸಿಟ್ಟಾದ ಕೆಲವರು ಉತ್ಸವ ಮೂರ್ತಿಯನ್ನು ಮುಟ್ಟಿದ ಎಂದು ಆತನನ್ನು ಥಳಿಸಿದ್ದರು. ಬಾಲಕನ ಕುಟುಂಬಕ್ಕೆ 60 ಸಾವಿರ ರೂಗಳ […]

ಮಹಾನ್ ವ್ಯಕ್ತಿಗಳ ಜೀವನದಿಂದ ಸ್ಪೂರ್ತಿ ಪಡೆದು ಶಿಕ್ಷಕರು ಉತ್ತಮ ಸಮಾಜ ರೂಪಿಸಬೇಕು: ಎಸ್.ಅಂಗಾರ

ಉಡುಪಿ: ಡಾ. ಎಸ್.ರಾಧಾಕೃಷ್ಣನ್ ಸೇರಿದಂತೆ ಅನೇಕ ಹಿರಿಯ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ಪಾಲನೆ ಮಾಡುವುದರೊಂದಿಗೆ ಶಿಕ್ಷಕರು ಉತ್ತಮ ಸಾಧನೆಗಳನ್ನು ಮಾಡಿ, ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಬೆಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು ಸೋಮವಾರ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಚೇರಿ ಉಡುಪಿ ಜಿಲ್ಲೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಡುಪಿ ತಾಲೂಕು ಹಾಗೂ ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣಾ ಸಮಿತಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ, ರಜತಾದ್ರಿಯ ಅಟಲ್ […]

ದೇವರಾಜ್ ಅರಸ್ ಹೆಜ್ಜೆ ಗುರುತಿನಲ್ಲಿ ಸಾಗುತ್ತಿರುವ ಕೋಟ ಶ್ರೀನಿವಾಸ್ ಪೂಜಾರಿಯವರ ನಡೆ ಅನುಕರಣೀಯ- ವಿಜಯ್ ಕೊಡವೂರು.

ಉಡುಪಿ: ಉಡುಪಿ ಜಿಲ್ಲಾಡಳಿತ ವತಿಯಿಂದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಆಗಸ್ಟ್ 20 ರಂದು ದೇವರಾಜ್ ಅರಸುರವರ 127 ನೇ ಜಯಂತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವರಾಜ ಅರಸು ಪ್ರಶಸ್ತಿ ಸಮಿತಿಯ ಸದಸ್ಯ ಮತ್ತು ಉಡುಪಿ ನಗರಸಭೆಯ ಸದಸ್ಯ ವಿಜಯ್ ಕೊಡವೂರು ಮಾತನಾಡಿ, ಹಿಂದುಳಿದ ವರ್ಗದ ಅಭಿವೃದ್ಧಿಗಾಗಿ ನಿಸ್ವಾರ್ಥವಾಗಿ ಯೋಚನೆ ಮಾಡಿರುವ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸುರವರು ನಡೆದ ದಾರಿಯಯಲ್ಲಿ ಕೋಟ ಶ್ರೀನಿವಾಸ್ ಪೂಜಾರಿಯವರು ಕೂಡಾ ನಡೆಯುತ್ತಿದ್ದಾರೆ. ಉಡುಪಿ ಜಿಲ್ಲೆ ಕಂಡ ಪ್ರಾಮಾಣಿಕ ಸರಳ ಸಜ್ಜನ ಸಚಿವರಾದ […]

ಕೋಟ: ಜುಲೈ 8 ರಂದು ಸಮಾಜ ಕಲ್ಯಾಣ ಇಲಾಖೆ ಸಚಿವರಿಂದ ಅಹವಾಲು ಸ್ವೀಕಾರ

ಉಡುಪಿ: ರಾಜ್ಯದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಜುಲೈ 8 ರಂದು ಬೆಳಗ್ಗೆ 7.30 ರಿಂದ 8.30 ರ ವರೆಗೆ ಕೋಟ ಗೃಹ ಕಚೇರಿಯಲ್ಲಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಎಂ.ಎಲ್.ಸಿ ಕೆ.ಪಿ ನಂಜುಂಡಿ ಮತ್ತು ಬೆಂಬಲಿಗರಿಗೆ ಬುದ್ಧಿ ಹೇಳಿ: ವಿಶ್ವಕರ್ಮ ಮುಖಂಡರಿಂದ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮನವಿ

ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ವಿಶ್ವಕರ್ಮ ಸಮಾಜ ಅತ್ಯಂತ ಬೆಳವಣಿಗೆ ಕಾಣುತ್ತಿರುವ ಸಮಾಜವಾಗಿದ್ದು, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸಹಿತ ಅನೇಕ ಕ್ಷೇತ್ರಗಳಲ್ಲಿ ತನ್ನದೇ ರೀತಿಯಲ್ಲಿ ಶಕ್ತಿ ಮೀರಿ ಶ್ರಮಿಸುತ್ತಿದೆ. ಇಂತಹ ಸಂದರ್ಭದಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರದಿಂದ ನೇಮಕಗೊಂಡ ವಿಶ್ವಕರ್ಮ ನಿಗಮದ ಅಧ್ಯಕ್ಷ ಶ್ರೀ ಬಾಬು ಪತ್ತರ್ ಮತ್ತು ಸಮುದಾಯದ ಹಿರಿಯ ಸ್ವಾಮೀಜಿಯವರಾದ ಹಾಸನ ಜಿಲ್ಲೆಯ ಹರೆ ಮಾದನ ಹಳ್ಳಿ ಶ್ರೀ ಶ್ರೀ ಶ್ರೀ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ […]