ಗುಣಮಟ್ಟದ ಹೂಡಿಕೆ‌ ಮಾಡದಿದ್ದರೆ ಆರ್ಥಿಕ ನಷ್ಟ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಪ್ರಸ್ತುತ ಹೂಡಿಕೆದಾರರನ್ನು ಜಾಗೃತಿ ಮಾಡಬೇಕಾದ ಅವಶ್ಯಕತೆ ಇದೆ. ಹೂಡಿಕೆದಾರ ಜಾಗೃತನಾಗಿ ಗುಣಮಟ್ಟದ ಹೂಡಿಕೆ ಮಾಡದೇ ಹೋದರೆ ಸಮಾಜಕ್ಕೆ ಸಮಸ್ಯೆಯ ಜತೆಗೆ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ. ಹೂಡಿಕೆಯಲ್ಲಿ ಗುಣಮಟ್ಟ, ಜಾಗೃತಿ, ಅಂಕಿಅಂಶ ಅಗತ್ಯ. ಆಸೆಯ ಚೌಕಟ್ಟು ಮೀರಿ ಹೋಗಬಾರದು ಎಂದು ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಭಾರತೀಯ ಲೆಕ್ಕ ಪರಿಶೋಧಕರ ಸಂಘದ ಉಡುಪಿ ಶಾಖೆ ವತಿಯಿಂದ ನಗರದ ಡಯಾನಾ ಹೋಟೆಲ್‌ನ ಸಭಾಂಗಣದಲ್ಲಿ ಬುಧವಾರ ನಡೆದ ಹೂಡಿಕೆದಾರರ ಜಾಗೃತಿ ಸಮಾವೇಶ ಉದ್ಘಾಟಿಸಿ […]