ಕೋಟ: ಸಾಲದ ಬಾಧೆ ತಾಳಲಾರದೆ ಓಮಿನಿ ಚಾಲಕ ಆತ್ಮಹತ್ಯೆ
ಕೋಟ: ಸಾಲ ಬಾಧೆ ತಾಳಲಾರದೆ ಓಮಿನಿ ಚಾಲಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ಮಣೂರು ಗ್ರಾಮದ ಹೆರೆ ಜಡ್ಡು ಎಂಬಲ್ಲಿ ನಡೆದಿದೆ. ಮಣೂರು ಗ್ರಾಮದ ಶೇಖರ (37) ಆತ್ಮಹತ್ಯೆ ಮಾಡಿಕೊಂಡ ಓಮಿನಿ ಚಾಲಕ. ಶೇಖರ ವಿಪರೀತ ಕುಡಿತದ ಚಟ ಬೆಳೆಸಿಕೊಂಡಿದ್ದು, ಇದೇ ಕಾರಣಕ್ಕೆ ಮೈ ತುಂಬಾ ಸಾಲ ಮಾಡಿಕೊಂಡಿದ್ದರು. ಅಲ್ಲದೆ, ಸೊಸೈಟಿ ಬ್ಯಾಂಕಿನಲ್ಲಿ ಸಾಲ ತೆಗೆದಿದ್ದರು. ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಫೆ. 19ರಂದು ರಾತ್ರಿ 11.30ರಿಂದ ಫೆ. 20ರ ಸಂಜೆ 4 ಗಂಟೆ […]