ಕೋಟ: ವಿವಾಹಿತ ಮಹಿಳೆ ಕಾಣೆ
ಕೋಟ: ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಕೋಟ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ಮಹಿಳೆಯನ್ನು ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮದ ದೇವಾಡಿಗರಬೆಟ್ಟು ನಿವಾಸಿ ಸುನೀತಾ (32 ) ಎಂದು ಗುರುತಿಸಲಾಗಿದೆ. ಅವರು ತಾಯಿ ಮನೆಯಿಂದ ಕಾಣೆಯಾಗಿದ್ದು, ಅವರನ್ನು ಎಲ್ಲಿಯಾದರೂ ಕಂಡರೆ ಕೋಟ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ವಿನಂತಿಸಲಾಗಿದೆ.